ಮೈಸೂರು

  ಆರ್ಥಿಕ ಸಹಾಯ ನೀಡಿ ಮಾನವೀಯತೆ  ಮೆರೆದ ಶಾಸಕ ಸಾ.ರಾ ಮಹೇಶ್  

ಮೈಸೂರು,ಫೆ.29:- ಕಳೆದ ಮೂರುವರೆ ತಿಂಗಳ ಹಿಂದೆ ಕೆ.ಆರ್. ನಗರದ ಜೈಲ್ ಮುಂಭಾಗ ಬೈಕ್ ಅಪಘಾತಕ್ಕೀಡಾಗಿದ್ದ ಚೌಕಳ್ಳಿ ಕಾಲೋನಿಯ ಪುನೀತ್ ಬಿನ್ ಕೃಷ್ಣ  ಎಂಬ ಪರಿಶಿಷ್ಟ ಸಮಾಜದ ಯುವಕನ ವೈದ್ಯಕೀಯ ವೆಚ್ಚದ ಬಾಕಿ ಹಣವನ್ನು ಶಾಸಕ ಸಾ.ರಾ.ಮಹೇಶ್ ಅವರು ಭರಿಸುವ ಮೂಲಕ ಆರ್ಥಿಕ ಸಹಾಯ ನೀಡಿ ಮಾನವೀಯತೆ  ಮೆರೆದಿದ್ದಾರೆ.

ಅಪಘಾತ ಆದ ಎರಡು ವಾಹನಗಳಿಗೂ ವಾಹನ ವಿಮೆ ಇರಲಿಲ್ಲ & ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಯುವಕನನ್ನು ಚಿಕಿತ್ಸೆಗಾಗಿ ಮೈಸೂರಿನ ಡಿ.ಆರ್, ಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯಕೀಯ ವೆಚ್ಚ  8 ಲಕ್ಷದ 40 ಸಾವಿರ ರೂ.ಖರ್ಚಾಗಿತ್ತು. ಯುವಕನ ಪೋಷಕರು ಕೇವಲ 2ಲಕ್ಷದ 50 ಸಾವಿರ ರೂಗಳನ್ನು ಪಾವತಿಸಿದ್ದರು.  ಆಡಳಿತಾಧಿಕಾರಿಗಳಾದ ಡಾ.ಮಂಜುನಾಥ ಅವರನ್ನು  ಸಹಾಯ ಮಾಡಲು   ಶಾಸಕರು ಕೇಳಿಕೊಂಡಿದ್ದರು.  ಬಿಲ್ ನಲ್ಲಿ  ಹಣವನ್ನು ಖಡಿತಗೊಳಿಸಿದ್ದು  ಉಳಿಕೆ ಹಣವನ್ನು  ಶಾಸಕ  ಸಾ.ರಾ ಮಹೇಶ್  ಭರಿಸುವ ಮೂಲಕ  ಕಷ್ಟದಲ್ಲಿದ್ದ   ಬಡ ಪರಿಶಿಷ್ಟ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: