ಮೈಸೂರು

ಪೌರ ಕಾರ್ಮಿಕರ ಕೊರತೆಯಿಂದಾಗಿ ವಾರ್ಡ್ ನ ಸ್ವಚ್ಛತೆ ಕಾಪಾಡಲು ಪಾಲಿಕೆ ವಿಫಲ : ವಿನೂತನ ಪ್ರತಿಭಟನೆ

ಮೈಸೂರು,ಮಾ.1: – ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆಯಿಂದಾಗಿ ವಾರ್ಡ್ ನ ಸ್ವಚ್ಛತೆ ಕಾಪಾಡಲು ಪಾಲಿಕೆ ವಿಫಲವಾಗಿದೆ ಎಂದು ಪಾಲಿಕೆ ವಿರುದ್ಧ ಪಾಲಿಕೆ ಸದಸ್ಯರೋರ್ವರು ಕುಟುಂಬ ಸಮೇತ ವಿನೂತನ ಪ್ರತಿಭಟನೆ ನಡೆಸಿದರು.

ಪಾಲಿಕೆ ಸದಸ್ಯರಿಗೆ ಪೌರ ಕಾರ್ಮಿಕರ ಕೊರತೆ ತಲೆ ನೋವಾಗಿದ್ದು, ವಾರ್ಡ್ ನಂ 61 ರ ಪಾಲಿಕೆ ಸದಸ್ಯರಾದ ಶೋಭಾ ಸುನೀಲ್‌ ಮತ್ತು ಕುಟುಂಬಸ್ಥರು ವಿನೂತನ ಪ್ರತಿಭಟನೆ ನಡೆಸಿದರು. ಕುಟುಂಬ ಸಮೇತ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ್ದು, ಜಿಲ್ಲಾಡಳಿತದ ಗಮನ ಸೆಳೆಯಲು ವಿನೂತ ಪ್ರಯತ್ನ ನಡೆಸಿದರು. ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. 700 ಜನಕ್ಕೆ ಒಬ್ಬ ಪೌರಕಾರ್ಮಿಕನನ್ನು ಪಾಲಿಕೆಯಿಂದ ನೀಡಿದ್ದಾರೆ. ಒಂದು ವಾರ್ಡ್ ಗೆ 24 ಜನ ಪೌರಕಾರ್ಮಿಕರನ್ನು ನೀಡಿದ್ದಾರೆ. ಅದರಲ್ಲಿ‌ 5 ಜನ ತೀರಿಹೋಗಿದ್ದಾರೆ,ಕೆಲವರಿಗೆ ಆರೋಗ್ಯ ಸರಿಯಿಲ್ಲದೆ ಕೆಲಸಕ್ಕೆ ಬರ್ತಾ ಇಲ್ಲ. ವಾರ್ಡ್ ನಲ್ಲಿ ಜನರಿಗೆ ಉತ್ತರ ನೀಡಲು ಆಗ್ತಾ ಇಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದಲ್ಲಿ ಆಯುಕ್ತರ ಕಛೇರಿಗೆ ಮುತ್ತಿಗೆಯನ್ನು ಹಾಕುತ್ತೇವೆ‌ ಎಂದು ಪಾಲಿಕೆ ಸದಸ್ಯೆ ಶೋಭಾ ಸುನೀಲ್ ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: