ಮೈಸೂರು

ಮಾರ್ಚ್ 6-8 : ರಾಜ್ಯಮಟ್ಟದ ಅಂಗವಿಕಲರ ಕ್ರೀಡಾಕೂಟ

ಮೈಸೂರು,ಮಾ.1:-  ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ವತಿಯಿಂದ ಮಾರ್ಚ್ 6. 7. 8 ರಂದು ಮೂರು ದಿನಗಳ ಕಾಲ ರಾಜ್ಯಮಟ್ಟದ ಅಂಗವಿಕಲರ ಕ್ರೀಡಾಕೂಟವನ್ನು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾ ಕಾರ್ಯದರ್ಶಿ  ಪ್ರಭುಸ್ವಾಮಿ ತಿಳಿಸಿದರು,

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು , ರಾಜ್ಯ ಮಟ್ಟದ ವಿಕಲ ಚೇತನ ಕ್ರೀಡಾಕೂಟಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು ಎರಡು ಸಾವಿರ ಮಂದಿ‌ ಭಾಗವಹಿಸಲಿದ್ದಾರೆ.  ಅದರಲ್ಲಿ ದೈಹಿಕ ಅಂಗವಿಕಲರು, ಗಾಲಿ ಕುರ್ಚಿ ಅಂಗವಿಕಲರು, ಕುಬ್ಜರು, ಅಂಧರು, ನರ ದೌರ್ಬಲ್ಯವುಳ್ಳ , ವಿಕಲಚೇತನರು, 10 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ,

ಕ್ರೀಡಾ ಸಚಿವ ಸಿಟಿ ರವಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಸಂಸದ ಪ್ರತಾಪ್ ಸಿಂಹ , ಚಿತ್ರ ನಟ ಶ್ರೀನಗರ ಕಿಟ್ಟಿ , ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹೆಸರಾಂತ ಕ್ರೀಡಾಪಟುಗಳು ಸ್ಥಳೀಯ ಶಾಸಕರು, ಹಲವು ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿ ಯಲ್ಲಿ ಮಹದೇವ, ರಾಮಚಂದ್ರ, ಪ್ರವಿಣ್ ಉಳ್ಳಾಗಡ್ಡಿ , ಕಿರಣ್ ಗೌಡ   ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: