ಕರ್ನಾಟಕಪ್ರಮುಖ ಸುದ್ದಿ

ಹೆಚ್‍ಡಿಕೆ ಸಾಮಾಜಿಕ ಜಾಲತಾಣ, ಜೆಡಿಎಸ್ ವೆಬ್‍ಪೋರ್ಟಲ್‍ಗೆ ಚಾಲನೆ

ಬೆಂಗಳೂರು : ಜೆಡಿಎಸ್ ಪಕ್ಷದ ವೆಬ್‍`ಪೋರ್ಟಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಹೆಸರಿನ ಪುಟಗಳಿಗೆ ಜೆಡಿಎಸ್‍ ರಾಜ್ಯಧ್ಯಕ್ಷ ಎಚ್‍.ಡಿ.ಕುಮಾರಸ್ವಾಮಿ ಅವರು ಇಂದು ಚಾಲನೆ ನೀಡಿದರು.

ನಮ್ಮ ಕುಮಾರಣ್ಣ ಎಂಬ ಹೆಸರಿನಲ್ಲಿ ಪೋರ್ಟಲ್‍ ಮತ್ತು “ನಮ್ಮ ಎಚ್‍ಡಿಕೆ” ಶೀರ್ಷಿಕೆಯ ಸಾಮಾಜಿಕ ಜಾಲತಾಣದ ಪುಟಗಳಿಗೆ ಚಾಲನೆ ನೀಡಲಾಯಿತು.

ವಿಧಾನಸೌಧದಲ್ಲಿ ಚಾಲನೆ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018 ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಅನುಕೂಲವಾಗುವ ದೃಷ್ಟಿಯಲ್ಲಿ ವೆಬ್‍ಪುಟಗಳಿಗೆ ಚಾಲನೆ ನೀಡಿದ್ದೇವೆ. ಇದು ನನ್ನ ಹಿತೈಷಿಗಳು ಸಿದ್ಧಪಡಿಸಿರುವ ವೆಬ್‍ ಪುಟಗಳಾಗಿದ್ದು, ಪಕ್ಷ ಮತ್ತು ಜನರ ನಡುವೆ ನೇರ ಸಂಪರ್ಕ ಬೆಸೆಯಲು ಸಹಾಯಕವಾಗಿವೆ ಎಂದರು.

ವೆಬ್ ಪುಟಗಳ ಕೊಂಡಿಗಳು ಇಲ್ಲಿವೆ.

https://www.facebook.com/Namma-HDK-997705723695221/

https://twitter.com/nammahdk

https://plus.google.com/u/0/118274661083989144622

https://www.youtube.com/channel/UCFSgZcqqFwNMXbabOYelIUQ

https://soundcloud.com/kumaraswamy-hd

ಬಿಜೆಪಿಯ ಅನುಕರಣೆಯೇ?

ಉತ್ತರ ಪ್ರದೇಶ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬಿಜೆಪಿ ಬಳಸಿಕೊಂಡಿತ್ತು. ೧೧ ಸಾವಿರ ವಾಟ್ಸಪ್ ಸಂಪರ್ಕ ಸಾಧಿಸಿತ್ತು. ಹೀಗಾಗಿ ನಾವು ಕೂಡ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದೇವೆ. ಆದರೆ ಬಿಜೆಪಿಯವರ ಅನುಕರಣೆ ಮಾಡುತ್ತಿಲ್ಲ. ಜನರು ತಮ್ಮ ಸಮಸ್ಯೆ, ಚರ್ಚೆಗಳನ್ನ ಸುಲಭವಾಗಿ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಸುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

ಜನರು ಈ ಪೋರ್ಟಲ್ ಮೂಲಕ ನನ್ನ ಜೊತೆ ಚರ್ಚಿಸಬಹುದು. ಜೆಡಿಎಸ್ ಅಧಿಕಾರಕ್ಕೆ ತರುವ ಗುರಿ ನನ್ನದು. ಹೀಗಾಗಿ ನೂತನ ವೆಬ್ ತಾಣಕ್ಕೆ ಚಾಲನೆ ನೀಡಿದ್ದೇವೆ. ಮಾದ್ಯಮಗಳ ಜೊತೆಯೂ ನಿರಂತರ ಸಂಪರ್ಕ ಸಾಧ್ಯ. ನಗರ, ಗ್ರಾಮೀಣ ಪ್ರದೇಶದಲ್ಲೂ ಸಂಪರ್ಕ ಸಾಧಿಸಬಹುದು.

ಸುಲಭ ಸಂಪರ್ಕ ಸಾಧ್ಯ:

ತಿಂಗಳಲ್ಲಿ ಒಂದು ದಿನ ಜನರ ಜೊತೆ ನೇರ ಸಂಪರ್ಕದಲ್ಲಿ ಇರುತ್ತೇನೆ. ಮೂರ್ನಾಲ್ಕು ಗಂಟೆ ಜನರ ಜೊತೆ ಸಂವಾದ ನಡೆಸುತ್ತೇನೆ. ಮೂವತ್ತೈದು ಜನ ಇದರಲ್ಲಿ ಕೆಲಸ ಮಾಡುತ್ತಾರೆ. ಎಲ್ಲ ಜನ, ಮತದಾರರನ್ನ ಸೆಳೆಯುವುದು ನಮ್ಮ ಉದ್ದೇಶ. ಪಂಚರಾಜ್ಯ ಚುನಾವಣೆಗೂ ಮುನ್ನವೇ ಸಿದ್ಧತೆ ಮಾಡಿಕೊಂಡಿದ್ದೆವು. ಈಗಾಗಲೇ ಒಂದೂವರೆ ಸಾವಿರ ಸದಸ್ಯರು ಆಗಿದ್ದಾರೆ. ಇಂದು  ಅಧಿಕೃತವಾಗಿ ಚಾಲನೆ ಮಾಡಿದ್ದೇವೆ. ಈ ನಂತರ ಬಹಳ ಸದಸ್ಯರನ್ನು ತಲುಪುವು ಗುರಿ ಇದೆ ಎಂದರು.

ಫೇಸ್ ಬುಕ್, ಟ್ವೀಟರ್, ಗೂಗಲ್ ಪ್ಲಸ್, ಸೌಂಡ್ ಕ್ಲೌಡ್ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪಕ್ಷದ ಬಲವರ್ಧನೆಗೆ ಜೆಡಿಎಸ್ ಪ್ರಯತ್ನಿಸುತ್ತಿದೆ. ಸೋಶಿಯಲ್ ಮಿಡಿಯಾವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬಿಜೆಪಿ ಬಹಳ ಮುಂದಿದೆ. ಇದೀಗ ಜೆಡಿಎಸ್ ಕೂಡ ಯೂಟ್ಯೂಬ್, ಟ್ವಿಟರ್, ಫೇಸ್‍ಬುಕ್‍ನಲ್ಲಿ ತನ್ನ ಪುಟಗಳನ್ನು ತೆರೆದಿದ್ದು, ಜನರ ಜೊತೆ ಸಂಪರ್ಕದಲ್ಲಿರಲು ತಂತ್ರಜ್ಞಾನದ ಮೊರೆ ಹೋಗಿದೆ.

ಯುಪಿ ಫಲಿತಾಂಶ ರಾಜ್ಯಕ್ಕೆ ಪರಿಣಾಮ ಬೀರುವುದೇ?

ಉತ್ತರಪ್ರದೇಶದಲ್ಲಿ ಕೇಂದ್ರದ ಅಭಿವೃದ್ಧಿ ಮೆಲೆ ಬಿಜೆಪಿ ಗೆದ್ದಿಲ್ಲ. ಅಲ್ಲಿನ ಎಸ್.ಪಿ. ಒಳಜಗಳದ ಲಾಭ ಪಡೆದು ಬಿಜೆಪಿ ಗೆಲುವು ಸಾಧಿಸಿದೆ ಅಷ್ಟೆ. ಸಮಾಜವಾದಿ ಪಕ್ಷದ ಸ್ವಯಂಕೃತ ಅಪರಾಧದಿಂದ ಬೆಲೆ ತೆತ್ತಿದೆ. ರಾಜ್ಯದಲ್ಲಿ ಅದರ ಎಫೆಕ್ಟ್ ಆಗಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಅವಧಿಯಲ್ಲಿ ರಾಜ್ಯ ಅಭಿವೃದ್ದಿಯಾಗಿಲ್ಲ. ಮೋದಿ, ಶಾ ಯಾವ ಆಧಾರದ ಮೇಲೆ ಮತ ಕೇಳ್ತಾರೆ?  ಅವರು ಇಲ್ಲಿ ಬಂದು ಏನು ಭಾಷಣ ಮಾಡ್ತಾರೆ? ಯುಪಿಯಲ್ಲಿ ಏನು ನಡೆದಿದೆ ಎಂಬುದು ನನಗೆ ಗೊತ್ತಿದೆ. ಅಲ್ಲಿ ಹಲವು ಐಎಎಸ್ ಅಧಿಕಾರಿಗಳು ನನ್ನ ಸ್ನೇಹಿತರಿದ್ದಾರೆ. ಬಿಜೆಪಿ ಗೆದ್ದಿದ್ದರ ಬಗ್ಗೆ ಎಲ್ಲ ಮಾಹಿತಿ ನೀಡಿದ್ದಾರೆ.

ಬಿಜೆಪಿಯವರದ್ದು ಮುಖ್ಯು ಅಜೆಂಡಾ ಕೋಮುವಾದ. ರಾಜ್ಯದಲ್ಲಿ ಕೋಮುವಾದ ಇಟ್ಟುಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಜೆಡಿಎಸ್ ಬಲಗೊಂಡಿರುವ ಕಡೆ ಕೋಮುವಾದಕ್ಕೆ ನಾವು ಅವಕಾಶ ಕೊಟ್ಟಿಲ್ಲ. ಕರಾವಳಿ ಭಾಗದಲ್ಲಿ ಮಾತ್ರ ಅವರು ಇದರ ಲಾಭ ಪಡೆದುಕೊಂಡಿದ್ದಾರೆ ಎಂದರು.

(ಎಸ್‍ಎನ್‍/ಎನ್‍ಬಿಎನ್‍)

Leave a Reply

comments

Related Articles

error: