ಪ್ರಮುಖ ಸುದ್ದಿವಿದೇಶ

ಭಾರತೀಯರ ಕ್ರಿಯೆಟಿವಿಟಿಗೆ ಮತಸೋತು ಭಾರತೀಯ ಗೆಳೆಯರಿಗೆ ತಮಾಷೆಯ ಉತ್ತರ ನೀಡಿದ ಇವಾಂಕಾ ಟ್ರಂಪ್ !

ದೇಶ(ನವದೆಹಲಿ)ಮಾ.2:-  ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಿರುಚಿದ ಫೋಟೋ ನೋಡಿದ ಕೂಡಲೇ ಖ್ಯಾತನಾಮರು ಸಿಟ್ಟಾಗುವುದು, ಪೊಲೀಸ್ ಗೆ ಕಂಪ್ಲೆಂಟ್ ಕೊಡೋದು ಸಾಮಾನ್ಯ. ಆದರೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಮಾತ್ರ ಫುಲ್ ಖುಷ್ ಆಗಿದ್ದಾರೆ.

ಇತ್ತೀಚೆಗೆ ಅವರು ಭಾರತಕ್ಕೆ ಬಂದಾಗ ತಾಜ್ ಮಹಲ್ ಎದುರಲ್ಲಿ   ತೆಗೆಸಿಕೊಂಡ ಫೋಟೋವನ್ನು ಭಾರತೀಯರು ಫೋಟೋ ಶಾಪ್ ಮೂಲಕ ತಿರುಚಿ ತಮ್ಮ ತಮ್ಮ ಪೋಟೋ ಸೇರಿಸಿಕೊಂಡಿರುವುದನ್ನು ಇವಾಂಕಾ ಬಹುವಾಗಿ ಮೆಚ್ಚಿಕೊಂಡಿದ್ದಾರೆ.

ಉಡ್ತಾ ಪಂಜಾಬ್ ಚಿತ್ರದ ದಿಲ್ಜಿತ್ ದೋಸಾಂಜ್, ತಾಜ್ ಮುಂದೆ ಇವಾಂಕಾ ತನ್ನನ್ನು ತಾಜ್ ಮಹಲ್’ಗೆ ಕರೆದೊಯ್ಯುವಂತೆ ಪೀಡಿಸುತ್ತಿದ್ದಳು. ಹೀಗಾಗಿ ಅನ್ಯಮಾರ್ಗ ಕಾಣದೇ, ಆಕೆಯನ್ನು ತಾಜ್ ಮಹಲ್’ಗೆ ಕರೆದೊಯ್ದೆ ಎಂದು ಟ್ವಿಟರ್ ನಲ್ಲಿ ಹಾಕಿದ್ದಾರೆ. ಇವಾಂಕಾ ಟ್ರಂಪ್ ದಿಲ್ಜಿತ್ ದೋಸಾಂಜ್ ಸೇರಿದಂತೆ ತನ್ನ ಉಳಿದ ಭಾರತೀಯ ಗೆಳೆಯರಿಗೆ ತಮಾಷೆಯ ಉತ್ತರವನ್ನು ನೀಡಿದ್ದಾರೆ.

‘ಅತ್ಯದ್ಭುತ ತಾಜ್’ಗೆ ಕರೆದೊಯ್ದಿದ್ದಕ್ಕೆ ಧನ್ಯವಾದಗಳು. ಈ ಅಪೂರ್ವ ಕ್ಷಣಗಳನ್ನು ನಾನೆಂದಿಗೂ ಮರೆಯುವುದಿಲ್ಲ ಎಂದು ಹಾಸ್ಯವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಇದು ಮರೆಯಲಾಗದ ಅನುಭವ.   ಭಾರತೀಯ ಜನರ ಪ್ರೀತಿಯನ್ನು ನಾನು ಪ್ರಶಂಸಿಸುತ್ತೇನೆ ಎಂದು ಬರೆದಿದ್ದಾರೆ. ನಾನು ಅಲ್ಲಿ ಅನೇಕ ಹೊಸ ಸ್ನೇಹಿತರನ್ನು ಮಾಡಿಕೊಂಡಿದ್ದೇನೆ ಎಂದು ಬರೆದಿದ್ದಾರೆ.

ಇದರ ನಂತರ ದಿಲ್ಜಿತ್ ದೋಸಾಂಜ್ ರಿಟ್ವೀಟ್ ಮಾಡಿ, ಓ ದೇವರೇ, ಅತಿಥಿ ದೇವೋಭವ. ಧನ್ಯವಾದಗಳು, ಇವಾಂಕಾ ಟ್ರಂಪ್   ಫೋಟೋಶಾಪ್ ಮಾಡಿದ್ದಲ್ಲ, ಫೋಟೋ  ಎಂದು ನಾನು ಜನರಿಗೆ  ಹೇಳಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇನೆ. ನಾನು ಈಗ ಲುಧಿಯಾನಕ್ಕೆ ಹೋಗುತ್ತಿದ್ದೇನೆ ಎಂದಿದ್ದಾರೆ.

ಒಟ್ಟಿನಲ್ಲಿ ಭಾರತೀಯರು ಕಾಲೆಳೆದರೂ ಅಮೇರಿಕ ಅಧ್ಯಕ್ಷರ ಪುತ್ರಿ ಅದನ್ನು ಹಾಸ್ಯವಾಗಿಯೇ ಪರಿಗಣಿಸಿದ್ದು ಮಾತ್ರ ಅತ್ಯದ್ಭುತ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: