ಮೈಸೂರು

ತಾನೇ ನೀತಿ ಪಾಠ ಹೇಳಿಕೊಟ್ಟ ವಿದ್ಯಾರ್ಥಿನಿಯೊಂದಿಗೆ 58 ವರ್ಷದ ಶಿಕ್ಷಕನ ಕಾಮದಾಟ : ರಾಸಲೀಲೆಯ ಫೋಟೋಗಳು ವೈರಲ್

ಮೈಸೂರು,ಮಾ.2:- ಮಾಜಿ ಮಂತ್ರಿ ದಿವಂಗತ ಡಿ.ಟಿ.ಜಯಕುಮಾರ್ ಆಪ್ತ ಸಹಾಯಕನಾಗಿದ್ದ ಶಿಕ್ಷಕನೋರ್ವನ ರಾಸಲೀಲೆಯ ಫೋಟೋಗಳು ಸಾಮಾಜಿಕ‌ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಸರ್ಕಾರಿ ಶಾಲಾ ಶಿಕ್ಷಕನ  ಕಾಮದಾಟ ಬಯಲಾಗಿದ್ದು, ಶಾಲೆಯ ಹಳೆಯ‌ ವಿದ್ಯಾರ್ಥಿನಿಯನ್ನು ಶಿಕ್ಷಕ ಮಂಚಕ್ಕೆ ಕರೆದಿದ್ದಾನೆ. ತಾನೇ ನೀತಿ ಪಾಠ ಹೇಳಿಕೊಟ್ಟಿರುವ  ವಿದ್ಯಾರ್ಥಿನಿಯೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿರುವ ನಂಜನಗೂಡು ತಾಲೂಕಿನ‌ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಮುಕ‌ ಶಿಕ್ಷಕನ ಬಣ್ಣ ಬಟಾ ಬಯಲಾಗಿದೆ. 58 ವರ್ಷದ ಶಿಕ್ಷಕ ಸಿದ್ದರಾಜು ಎಂಬಾತನೇ 20 ವರ್ಷದ ಹಳೇ‌ ವಿದ್ಯಾರ್ಥಿನಿಗೆ ಕಾಮದ ಪಾಠ ಮಾಡುತ್ತಿದ್ದಾನೆ. ಚಿಕ್ಕ ವಯಸ್ಸಿನಿಂದಲೇ ಪಾಠ ಹೇಳಿಕೊಟ್ಟಿದ್ದ ಸಿದ್ದರಾಜು ಇದೀಗ ಹಳೇ ವಿದ್ಯಾರ್ಥಿನಿಯೊಂದಿಗೆ ಕಾಮಲೀಲೆ ಆಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ. ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ಗ್ರಾಮದಿಂದ ನಾಪತ್ತೆಯಾಗಿರುವ ಸಿದ್ದರಾಜು ಇಬ್ಬರು ಹೆಂಡಿರ ಮುದ್ದಿನ ಗಂಡನಾಗಿದ್ದು, ಹಳೆ ವಿದ್ಯಾರ್ಥಿನಿಯೊಂದಿಗೆ ಸಲ್ಲಾಪ ನಡೆಸುತ್ತಿದ್ದಾನೆ,. ಧನುರ್ವಾಯು ರೋಗದಿಂದ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರೂ ಯುವತಿಯೊಂದಿಗೆ ಕಾಮದಾಟವಾಡುತ್ತಿದ್ದು, ದಿವಂಗತ ಡಿ.ಟಿ.ಜಯಕುಮಾರ್ ಮಂತ್ರಿಯಾಗಿದ್ದ ಅವಧಿಯಲ್ಲಿ ಈತ ಆಪ್ತ ಸಹಾಯಕನಾಗಿದ್ದ. ಸುಮಾರು 25 ವರ್ಷಗಳಿಂದ ರಾಂಪುರ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದು, ಸಿದ್ದರಾಜು ವರ್ತನೆಯಿಂದ ಗ್ರಾಮಸ್ಥರು ಬೇಸತ್ತಿದ್ದಾರೆ.

ಶಿಕ್ಷಕನನ್ನು ಅಮಾನತು ಪಡಿಸುವಂತೆ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: