
ಮನರಂಜನೆ
ಪ್ರೇಕ್ಷಕ ಚಿತ್ರವನ್ನು ನೋಡಲೇಬೇಕೆಂಬ ಬಯಕೆಯನ್ನು ಹುಟ್ಟುಹಾಕುವ ‘ಸೂರ್ಯವಂಶಿ’ : ಅದ್ಭುತ ಟ್ರೈಲರ್ ಬಿಡುಗಡೆ
ದೇಶ(ನವದೆಹಲಿ)ಮಾ.2:- ಬಾಲಿವುಡ್ ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಬಹುನಿರೀಕ್ಷಿತ ಚಿತ್ರ ‘ಸೂರ್ಯವಂಶಿ’ ಟ್ರೇಲರ್ ಬಿಡುಗಡೆಯಾಗಿದೆ.
ರೋಹಿತ್ ಶೆಟ್ಟಿ ಚಿತ್ರದಿಂದ ನೀವು ಏನನ್ನು ನಿರೀಕ್ಷಿಸಬಹುದೆಂದುಕೊಂಡಿದ್ದೀರೋ ಈ ಟ್ರೈಲರ್ನಲ್ಲಿ ಇದರ ಒಂದು ನೋಟ ನಿಮಗೆ ಸಿಗಲಿದೆ. ಪ್ರೇಕ್ಷಕ ಈ ಚಿತ್ರವನ್ನು ನೋಡಲೇಬೇಕೆಂಬ ಬಯಕೆಯನ್ನು ಹುಟ್ಟುಹಾಕುವ ಅದ್ಭುತ ಟ್ರೈಲರ್ ಇದಾಗಿದೆ.
ನಟ, ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಇಡೀ ಟ್ರೈಲರ್ ನ್ನೇ ಆಕ್ರಮಿಸಿಕೊಂಡಿದ್ದಾರೆ, ನಟಿ ಕತ್ರಿನಾ ಕೈಫ್ ಕೂಡ ಕಾಣಿಸಿಕೊಂಡಿದ್ದಾರೆ. ನಟಿ ಕತ್ರಿನಾ ಕೈಫ್ ಅಕ್ಷಯ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ದೃಶ್ಯವೊಂದಿದೆ. ರೋಹಿತ್ ಅವರು ತಮ್ಮ ಚಿತ್ರದ ಟ್ರೈಲರ್ನಲ್ಲಿ ಅತ್ಯುತ್ತಮ ದೃಶ್ಯವನ್ನು ತೋರಿಸುತ್ತಾರೆ ಎಂಬುದು ಪ್ರಸಿದ್ಧವಾಗಿದೆ. ಆದ್ದರಿಂದ ‘ಸೂರ್ಯವಂಶಿ’ಯ ಅತ್ಯುತ್ತಮ ದೃಶ್ಯಗಳನ್ನು ಸಹ ಈ ನೋಟದಲ್ಲಿ ನೋಡಬಹುದಾಗಿದೆ.
ಆಕ್ಷನ್ ಸನ್ನಿವೇಶಗಳನ್ನು ಬಹಳ ಸಮಯದಿಂದ ಚಿತ್ರೀಕರಿಸಲಾಗಿದ್ದು, ಬ್ಯಾಂಕಾಕ್ನಲ್ಲಿಯೇ ಈ ಕೆಲಸ ಸುಮಾರು ಒಂದು ತಿಂಗಳ ಕಾಲ ನಡೆಯಿತು. ಈ ನಿರ್ದಿಷ್ಟ ದೃಶ್ಯದ ಒಂದು ಚಿತ್ರ ಹಲವಾರು ತಿಂಗಳ ಹಿಂದೆ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಕಾಣಿಸಿಕೊಂಡಿತು.
ಫೈಟ್ ಡೈರೆಕ್ಟ್ ಸುನಿಲ್ ರೊಡ್ರಿಗಸ್ ಈ ಚಿತ್ರದಲ್ಲಿ ಶ್ರಮಿಸಿದ್ದಾರೆ. ಚಲನಚಿತ್ರ ಜಗತ್ತಿನಲ್ಲಿ ಸುನಿಲ್ ದೊಡ್ಡ ಹೆಸರು ಮಾಡಿದ್ದು, ‘ಸಿಂಬಾ’ ಸೋನಿ ಚಿಡಿಯಾ ಸೇರಿದಂತೆ ಹಲವು ಚಿತ್ರಗಳಲ್ಲಿ ಆಕ್ಷನ್ ಚಿತ್ರೀಕರಣ ಮಾಡಿದ್ದಾರೆ.
ರೋಹಿತ್ ಶೆಟ್ಟಿ ನಿರ್ಮಾಣದ ಚಿತ್ರಗಳಲ್ಲಿನ ಹಳೆಯ ಪೊಲೀಸರು ಅಂದರೆ ನಟರಾದ ಅಜಯ್ ದೇವಗನ್ ಮತ್ತು ರಣವೀರ್ ಸಿಂಗ್ ಅವರನ್ನು ಕೂಡ ‘ಸೂರ್ಯವಂಶಿ’ ಚಿತ್ರದಲ್ಲಿ ಕಾಣಬಹುದಾಗಿದೆ.
ಅಕ್ಷಯ್ ಕುಮಾರ್ ಟ್ವೀಟರ್ ನಲ್ಲಿ ಟ್ರೈಲರ್ ಹಂಚಿಕೊಂಡಿದ್ದು, ‘ಡಿಸಿಪಿ ವೀರ್ ಸೂರ್ಯವಂಶಿ ನೌ ರಿಪೋರ್ಟಿಂಗ್ ಲೈವ್’ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯಾಗಿ ನಟಿಸುತ್ತಿದ್ದು, ಚಿತ್ರ ಮಾರ್ಚ್ 24 ರಂದು ತೆರೆ ಕಾಣಲಿದೆ. (ಕೆ.ಎಸ್,ಎಸ್.ಎಚ್)