ಮೈಸೂರು

ಜೂನ್ ವರೆಗೆ ಕುಡಿಯುವ ನೀರನ್ನು ಸರ್ಕಾರ ಕಾಯ್ದಿರಿಸಬೇಕು

ಮೈಸೂರು ನಗರಕ್ಕೆ ಪ್ರತಿ ತಿಂಗಳು ಕುಡಿಯುವ ನೀರಿಗಾಗಿ 0.5ಟಿ.ಎಂಸಿ ನೀರು ಅಗತ್ಯವಿದ್ದು, ಮುಂದಿನ ಜೂನ್ ವರೆಗೆ 4.05ಟಿ.ಎಂ.ಸಿ ನೀರನ್ನು ಸರ್ಕಾರ ಕಾಯ್ದಿರಿಸಬೇಕು ಎಂದು ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿದೆ.

ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್  ಸಭಾಂಗಣದಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸದಿರಲು ತೀರ್ಮಾನಿಸಿರುವ ಸರ್ಕಾರದ ದಿಟ್ಟ ನಿಲುವನ್ನು ಸರ್ವಸದಸ್ಯರು ಒಮ್ಮತದಿಂದ ಬೆಂಬಲಿಸಿದರು.

ಮಾಜಿ ಮಹಾಪೌರ ಆರ್.ಲಿಂಗಪ್ಪ ಮಾತನಾಡಿ ತಮಿಳುನಾಡಿನ ಜನರಿಗೆ ಸ್ವಾಭಿಮಾನ ಅನ್ನುವುದಿದ್ದರೆ ನೀರನ್ನು ನಮ್ಮಿಂದ ಕೇಳಬಾರದು. ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ನ್ಯಾಯಾಲಯವು ನೀರಿನ ಸಂಗ್ರಹವನ್ನು ಪರಿಶೀಲಿಸಿ ತೀರ್ಪು ನೀಡಬೇಕಿತ್ತು ಎಂದರು.

ಕೆ.ಟಿ.ಚಲುವಗೌಡ ಮಾತನಾಡಿ ನೆಲ-ಜಲದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ರಾಜ್ಯ ಸರ್ಕಾರದ ನಿರ್ಣಯ ಸಮಂಜಸವಾಗಿದೆ ಎಂದರು.

ಸಭೆಯಲ್ಲಿ ಮೇಯರ್ ಬಿ.ಎಲ್.ಭೈರಪ್ಪ, ಉಪಮೇಯರ್  ವನಿತಾ ಪ್ರಸನ್ನ, ಆಯುಕ್ತ ಜಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Tags

Related Articles

error: