ಮೈಸೂರು

ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ 3 ದಿನಗಳ ಕೌಶಲ್ಯ ತರಬೇತಿ ಕಾರ್ಯಾಗಾರ

ಮೈಸೂರು,ಮಾ.2:- ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ‘ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾವಕಾಶ’ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ 3 ದಿನಗಳ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರದ ತರಬೇತುದಾರರಾಗಿ ಸೈಫ್‍ಉಲ್ಲಾಖಾನ್, ಮೆಕಾನಿಕಲ್ ಇಂಜಿನಿಯರ್ ಮತ್ತು ವೃತ್ತಿಪರ ತರಬೇತುದಾರರು ಇವರು ಯು.ಎಸ್.ಎ. ಎನ್.ಎಲ್.ಪಿ. ಯಿಂದ ಪ್ರಮಾಣಪತ್ರ ಪಡೆದ ತರಬೇತುದಾರರು ಹಾಗೂ ಟಾಕ್ ಟು ಅಸ್ ಸಂಸ್ಥೆಯ ಸಹ ಸಂಸ್ಥಾಪಕರು ಆಗಿದ್ದಾರೆ. ಶ್ರೀ ಹರಿ, ಜೆ.ಎಸ್.ಎಸ್. ಪಾಲಿಟೆಕ್ನಿಕ್ ಪದವಿಧರರಾಗಿದ್ದಾರೆ. ಸಲ್‍ಮಾನ್ ಅಹ್ಮದ್ ಇವರು ನುರಿತ ತರಬೇತುದಾರರುಗಳು.
ಈ ತರಬೇತಿಯಲ್ಲಿ ಸಾರ್ವಜನಿಕ ಭಾಷಣ, ಪ್ರಸ್ತುತತೆ, ತಂಡ ನಿರ್ಮಾಣ ಚಟುವಟಿಕೆಗಳು, ಸಮಯ ನಿರ್ವಹಣೆ ಮತ್ತು ಗುಂಪು ಚರ್ಚೆ ಇವುಗಳ ಕುರಿತು ಒಟ್ಟು 250 ಅಂತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ, ಡಾ. ಎಸ್. ವೆಂಕಟರಾಮು, ವೃತ್ತಿ ಮಾರ್ಗದರ್ಶಿ ಮತ್ತು ಉದ್ಯೋಗಾವಕಾಶ ವಿಭಾಗದ ಸಂಚಾಲಕರಾದ ರಂಜಿತಾ, ಸಹಾಯಕ ಪ್ರಾಧ್ಯಾಪಕರು, ಗಣಕ ವಿಜ್ಞಾನ ವಿಭಾಗ ಅವರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: