ದೇಶಪ್ರಮುಖ ಸುದ್ದಿ

ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಪ್ರಯಾಣಿಸಿದ್ದ ಏರ್ ಇಂಡಿಯಾ ವಿಮಾನ ಸಿಬ್ಬಂದಿಗೆ 14 ದಿನ ಮನೆಯಲ್ಲಿರುವಂತೆ ಸೂಚನೆ

ನವದೆಹಲಿ,ಮಾ.3-ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ದಿಲ್ಲಿ ನಿವಾಸಿ ಪ್ರಯಾಣಿಸಿದ್ದ ವಿಮಾನದಲ್ಲಿದ್ದ ಏರ್‌ ಇಂಡಿಯಾದ ಎಲ್ಲ ಸಿಬ್ಬಂದಿ 14 ದಿನಗಳವರೆಗೆ ತಮ್ಮ ಮನೆಗಳಲ್ಲಿಯೇ ಇರುವಂತೆ ಅಧಿಕಾರಿಗಳು ನಿರ್ದೇಶಿಸಿದ್ದಾರೆ.

ಫೆ.25ರಂದು ಏರ್ ಇಂಡಿಯಾ ವಿಮಾನದಲ್ಲಿ ಇಟಲಿಯಿಂದ ಬಂದಿಳಿದ ಪ್ರಯಾಣಿಕನಿಗೆ ಕೊರೊನಾ ದೃಢಪಟ್ಟಿರುವುದನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಸೋಮವಾರ ಪ್ರಕಟಿಸಿದ್ದಾರೆ.

ಕೊರೊನಾ ವೈರಾಣು ಸೋಂಕು ದೃಢಪಡಲು ಮತ್ತು ಲಕ್ಷಣಗಳು ಉಲ್ಬಣಗೊಳ್ಳಲು ಅಥವಾ ಗುಣಮುಖರಾಗಲು ಕನಿಷ್ಠ 14 ದಿನಗಳ ಅವಧಿ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಮನೆಯಲ್ಲಿಯೇ ಇದ್ದು, ಸೂಕ್ತ ವೈದ್ಯರಿಂದ ಪರೀಕ್ಷಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಸೋಂಕು ದೃಢಪಟ್ಟಿರುವ ದಿಲ್ಲಿ ನಿವಾಸಿ ಪ್ರಯಾಣಿಸಿದ್ದ ವಿಯೆನ್ನಾ-ದಿಲ್ಲಿ ವಿಮಾನದಲ್ಲಿದ್ದ ಏರ್‌ ಇಂಡಿಯಾದ ಎಲ್ಲ ಸಿಬ್ಬಂದಿ 14 ದಿನಗಳವರೆಗೆ ತಮ್ಮ ಮನೆಗಳಲ್ಲಿಯೇ ಇರುವಂತೆ ಅಧಿಕಾರಿಗಳು ನಿರ್ದೇಶಿಸಿದ್ದಾರೆ.

ಇರಾನ್‌ನ ದಂಡನಾಯಕ ಅಯಾತೊಲ್ಹಾ ಅಲಿ ಖಮೀನಿ ಅವರ ಆಪ್ತ ಸಲಹೆಗಾರರ ವಲಯದಲ್ಲಿದ್ದ 71 ವರ್ಷದ ಮೊಹ್ಮಮದ್‌ ಮಿರ್‌ಮೊಹಮ್ಮದಿ ಅವರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಇರಾನ್‌ನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 66ಕ್ಕೆ ಏರಿದೆ. ಇನ್ನೂ 1,501 ಮಂದಿಗೆ ಸೋಂಕಿರುವುದು ದೃಢಪಟ್ಟಿದೆ. ಚೀನಾ ಹೊರತಾಗಿ ಮಧ್ಯಪ್ರಾಚ್ಯದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರು ಇರಾನ್‌ನಲ್ಲಿ ಪತ್ತೆಯಾಗಿದ್ದಾರೆ.

ವೈರಸ್ ನಿಂದಾಗಿ ಚೀನಾವೊಂದರಲ್ಲಿಯೇ ಇದುವರೆಗೂ 2954 ಮಂದಿ ಮೃತಪಟ್ಟಿದ್ದು, ಒಟ್ಟಾರೆ ವಿಶ್ವದಲ್ಲಿ 3151 ಮಂದಿ ಬಲಿಯಾಗಿದ್ದಾರೆ. ಸೋಮವಾರ ಒಂದೇ ದಿನದಲ್ಲಿ ಜಾಗತಿಕವಾಗಿ 1,823 ಕೊರೊನಾ ಸೋಂಕಿತರ ಪ್ರಕರಣಗಳು ಬೆಳಕಿಗೆ ಬಂದಿವೆ. ಜತೆಗೆ 45,702 ಮಂದಿ ಇದುವರೆಗೂ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. (ಎಂ.ಎನ್)

Leave a Reply

comments

Related Articles

error: