ಮೈಸೂರು

ಏಪ್ರಿಲ್ 1 ರಿಂದ ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮ : ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮಾಹಿತಿ

 ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಪಾಲಿಕೆ ಸಜ್ಜು

ಮೈಸೂರು,ಮಾ.3:-ಆಸ್ತಿ ತೆರಿಗೆ ಪಾವತಿಸಲು ಇನ್ಮುಂದೆ ಪಾಲಿಕೆ ಕಛೇರಿಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ತೆರಿಗೆ ಪಾವತಿಸಬಹುದು.  ಆಸ್ತಿ ತೆರಿಗೆಯನ್ನು ಇನ್ನು ಮುಂದೆ ಆನ್ ಲೈನ್ ನಲ್ಲೂ ಪಾವತಿಸಬಹುದು.

ಏಪ್ರಿಲ್ 1 ರಿಂದ ನಿಮ್ಮ ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕವೇ  ಪಾವತಿಸಬಹುದು. ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆ ಅವಕಾಶ ಕಲ್ಪಿಸಿದ್ದು, ನೂತನ ಆರ್ಥಿಕ ವರ್ಷದಿಂದ ಆನ್ ಲೈನ್ ಸೌಲಭ್ಯ ಲಭ್ಯವಾಗಲಿದೆ. ಏಪ್ರಿಲ್ 1 ರಿಂದಲೇ ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮಾಹಿತಿ ನೀಡಿದರು.

ಪಾಲಿಕೆಯಲ್ಲಿರುವ ಅವರ ಕಛೇರಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆನ್ ಲೈನ್ ನಲ್ಲಿ ನಲವತ್ತಕ್ಕೂ ಹೆಚ್ವು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ ಒಂದರಿಂದ ಆನ್ ಲೈನ್ ಮೂಲಕ ಪಾವತಿಸಲು ಅವಕಾಶ ಮಾಡಿಕೊಡಲಾಗುವುದು. ವಿವಿಧ ಆ್ಯಪ್ ಗಳ ಮೂಲಕ ತೆರಿಗೆ ಪಾವತಿಸಬಹುದಾಗಿದೆ. ಇದರಿಂದ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದ್ದು, ಅವರ ಆಸ್ತಿ ತೆರಿಗೆ ಬಗ್ಗೆ ಮಾಹಿತಿ ದೊರೆಯಲಿದೆ. ಜೊತೆಗೆ ಜನರು ಕೌಂಟರ್ ನಲ್ಲಿ ನಿಂತು ತೆರಿಗೆ ಪಾವತಿ ಮಾಡುವುದು ತಪ್ಪುತ್ತದೆ. ಇದರಿಂದ ಪಾಲಿಕೆ ಕೂಡ ಹೆಚ್ವು ತೆರಿಗೆ ಸಂಗ್ರಹಿಸಲು ನೆರವಾಗುತ್ತದೆ. ಜನರಿಗೂ ಪಾಲಿಕೆಗೂ ಇದರಿಂದ ಅನುಕೂಲ ಆಗಲಿದೆ ಎಂದರು.

 ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಪಾಲಿಕೆ ಸಜ್ಜು

ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಪಾಲಿಕೆ ಸಜ್ಜಾಗಿದೆ ಎಂದು ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು. ಮೈಸೂರು ನಗರದಲ್ಲಿ ನಾಲ್ಕು ಭಾಗಗಳಾಗಿ ವಿಂಗಡಿಸಿ ಕ್ರಮ ಕೈಗೊಳ್ಳಲಾಗುವುದು. ನೀರಿನ ಸಮಸ್ಯೆ ಆದರೆ ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ವಾಟರ್ ಮನ್ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ನೀರಿನ ಸಮಸ್ಯೆ ಎದುರಾದರೆ ತಕ್ಷಣ ಕ್ರಮ ಕೈಗೊಳ್ಳವಂತೆ ಸೂಚನೆ ನೀಡಿದ್ದೇನೆ. ಎನ್ ಆರ್ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉದ್ಭವವಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಮೇಗಳಾಪುರದ ವಾಟರ್ ಸಫ್ಲೈ ಯೋಜನೆ ಪೂರ್ಣಗೊಂಡರೆ ಎನ್ ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಯಲಿದೆ. ಮೇಗಳಾಪುರದ ಯೋಜನೆಯ ಪ್ರಗತಿ ಬಗ್ಗೆ  ಪ್ರತಿದಿನ ಮಾಹಿತಿ ಪಡೆಯುತ್ತಿದ್ದೇವೆ. ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣವಾಗುವುದಾಗಿ ವಾಟರ್ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ. ನೀರು ಪೋಲಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಅನಧಿಕೃತ ಕನೆಕ್ಷನ್ ಗಳನ್ನು ಅಧಿಕೃತಗೊಳಿಸಲು ಸೂಚನೆ ನೀಡಲಾಗಿದೆ. ನೀರು ಸೋರಿಕೆ ತಡೆಗಟ್ಟಲು ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: