
ಮೈಸೂರು
ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿಗೆ ಪರ್ಯಾಯ ಪಾರಿತೋಷಕ : ಸಾಧಕರಿಗೆ ಅಭಿನಂದನೆ
ಮೈಸೂರು,ಮಾ.3:- ಮೈಸೂರಿನ ಮಹಾರಾಣಿ ಮಹಿಳಾ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತರ ಕಾಲೇಜು ಎಂ. ಜಯಲಕ್ಷ್ಮಮ್ಮಣ್ಣಿ ಸ್ಮಾರಕ ಸಂಗೀತ ಸ್ಪರ್ಧೆಯಲ್ಲಿ ಭಾರತಿ ಹೆಚ್.ಸಿ. (ಭಾವಗೀತೆ ಮತ್ತು ದೇವರನಾಮ) ಪ್ರಥಮ ಬಹುಮಾನ ಹಾಗೂ ಮನೋಜ್ಞ ಜಮದಗ್ನಿ ಎಸ್.ಎಲ್. (ದೇವರನಾಮ ಮತ್ತು ಶಾಸ್ತ್ರೀಯ ಸಂಗೀತ) ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ಪರ್ಯಾಯ ಪಾರಿತೋಷಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸತತವಾಗಿ 3 ವರ್ಷಗಳು ಪಾರಿತೋಷಕವನ್ನು ಪಡೆದ ವಿಜೇತರನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ವೆಂಕಟರಾಮು, ಸಾಂಸ್ಕೃತಿಕ ವೇದಿಕೆ ಸಂಚಾಲಕರು, ಉಪ ಪ್ರಾಂಶುಪಾಲರಾದ ಬಿ.ಆರ್. ಜಯಕುಮಾರಿ ಮತ್ತು ಡಾ. ಎಸ್.ಆರ್. ರಮೇಶ್, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾಲೇಜಿನ ಅಧ್ಯಾಪಕರು / ಅಧ್ಯಾಪಕೇತರರು ಅಭಿನಂದಿಸಿದ್ದಾರೆ. (ಜಿ.ಕೆ,ಎಸ್.ಎಚ್)