ಮೈಸೂರು

ಸರ್ವೋದಯ ಪಕ್ಷ ಸ್ವರಾಜ್ ಜೊತೆ ವಿಲೀನಗೊಳ್ಳಲಿದೆ : ಸಾಹಿತಿ ದೇವನೂರು ಮಹದೇವ

ಕಳೆದ ಹತ್ತು ವರ್ಷದಿಂದ ಜನಪರ ಹೋರಾಟ ನಡೆಸುತ್ತಿದೆ.ಇಂದಿನ ವಿಧ್ವಂಸಕ ರಾಜಕರಣದ ನಡುವೆ ರಚನತ್ಮಾಕ ರಾಜಕಾರಣ ಕಷ್ಟವಾಗಿದ್ದು,ನಾಡು ಕಟ್ಟುವ ವಿವೇಕದಿಂದ ಹಾಗೂ ಪ್ರಾಯೋಗಿಕವಾಗಿ ವಿಲೀನವಾಗುತ್ತಿದೆ.ಸರ್ವೋದಯ ಪಕ್ಷ ಸ್ವರಾಜ್ ಜೊತೆ ವಿಲೀನವಾಗಿ ರಾಷ್ಟ್ರ ವ್ಯಾಪಿಯಾಗುತ್ತಿದೆ. ನಮ್ಮ ಹೋರಾಟವನ್ನು ದೇಶ ವ್ಯಾಪಿ ವಿಸ್ತರಿಸುತ್ತಿದ್ದೇವೆ ಎಂದು ಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷ ಸಾಹಿತಿ ದೇವನೂರು ಮಹದೇವ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವನೂರು ಮಹದೇವ ಮಾತನಾಡಿ ಇದೇ ತಿಂಗಳ 25ರಂದು ಯೋಗೆಂದ್ರಯಾದವ್ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ನಡೆಯುವ ಸಮಾರಂಭದಲ್ಲಿ ಪಕ್ಷ ವಿಲೀನಗೊಳ್ಳಲಿದೆ ಎಂದರು. ಸ್ವರಾಜ್ ಇಂಡಿಯಾ ಪಕ್ಷವು ಮೊದಲು ನಡೆ, ಆಮೇಲೆ ನುಡಿ ಎಂಬ ಧ್ಯೇಯವನ್ನು ಅನುಸರಿಸುತ್ತಿದೆ. ಅದರ ಘೋಷಣಾ ವಾಕ್ಯ ರಾಜಕಾರಣಕ್ಕೆ ಹೊಸ ನಡಿಗೆ ಎಂಬುದೇ ವಿಶೇಷವಾಗಿದೆ.

ನಂಜನಗೂಡು ಕ್ಷೇತ್ರದ ಚುನಾವಣೆಯನ್ನು ಪ್ರಸಾದ್ ರವರು ಪ್ರತಿಷ್ಠೆ ಯಾಗಿ ತೆಗೆದುಕೊಳ್ಳದೆ ಬೇರೆ ರೀತಿ ಹೋರಾಟ ಮಾಡಬಹುದಿತ್ತು. ಮೋದಿಯ ಅಲೆ ಅತಿವೃಷ್ಠಿ ಇದ್ದಂತೆ ಇದು ಜಾಸ್ತಿ ದಿನ ಇರಲಾರದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷೆ ಚುಕ್ಕಿ ನಂಜುಂಡಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಗುರುಪ್ರಸಾದ್ ಕೆರಗೋಡು,ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: