ಮೈಸೂರು

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ : ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ ಪ್ರಜ್ಞಾವಂತ ನಾಗರೀಕ ವೇದಿಕೆ

ಮೈಸೂರು,ಮಾ.4:- ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ   ಪ್ರಜ್ಞಾವಂತ ನಾಗರೀಕ ವೇದಿಕೆ ಧೈರ್ಯ ತುಂಬಿ, ಗುಲಾಬಿ ಹೂ-ಲೇಖನಿ ನೀಡುವ  ಮೂಲಕ ಶುಭ ಹಾರೈಸಿದೆ.

ಸದ್ವಿದ್ಯಾ ಕಾಲೇಜಿನ ಸೆಂಟರ್ ನಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ  ಪ್ರಜ್ಞಾವಂತ ನಾಗರೀಕರು ಮೈಸೂರಿಗೆ ಉನ್ನತ ಫಲಿತಾಂಶ ಬರಲೆಂದು ಹಾರೈಸಿ ಶುಭ ಕೋರಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆಂದು ವಿದ್ಯಾರ್ಥಿಗಳಿಗೆ ಅಭಯ‌ ನೀಡಿದರು. ಈ ಸಂದರ್ಭ ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ ರವಿ  ಮಾತನಾಡಿ ಪರೀಕ್ಷೆಯನ್ನು ಸಂಭ್ರಮದಿಂದ ಬರೆಯಿರಿ. ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಂಭ್ರಮದಿಂದ ಬರೆದರೆ ನಿರೀಕ್ಷೆಗಿಂತಲೂ ಹೆಚ್ಚಿನ ಅಂಕಗಳನ್ನು ಪಡೆಯಬಹುದು , ವಿದ್ಯಾರ್ಥಿಗಳು ಪರೀಕ್ಷೆ ಶತ್ರು ಎಂದು ಪರಿಗಣಿಸಿದರೆ ವರ್ಷವಿಡೀ ಕಲಿತ ಪಾಠಗಳೆಲ್ಲ ಮರೆತು ಹೋಗುತ್ತವೆ, ಯಾವುದೇ ಕಾರಣಕ್ಕೂ ಪರೀಕ್ಷೆ ಭೂತ ಎಂದುಕೊಳ್ಳಬೇಡಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಿ. ವಿದ್ಯಾರ್ಥಿಗಳಿಗೆ ಪೋಷಕರು ಆತ್ಮಸ್ಥೈರ್ಯ ತುಂಬಬೇಕು. ಸಂಕುಚಿತ ಮನೋಭಾವದಿಂದ ಸುಮ್ಮನೆ ಕುಳಿತರೆ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ. ದೊಡ್ಡ ದೊಡ್ಡ ಸಂಶೋಧನೆಗಳು ಹುಟ್ಟಿಕೊಂಡಿದ್ದೇ ಪ್ರಶ್ನೆಗಳಿಂದ ಎನ್ನುವುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ,ಪರೀಕ್ಷೆ ಒಂದು ಸಂಭ್ರಮ ಎನ್ನುವುದರ ಜೊತೆಗೆ ಆಂತರಿಕವಾಗಿ ನೀವು ಮೊದಲು ಪ್ರಶ್ನೆ ಮಾಡಿಕೊಳ್ಳಿ ,ಪರೀಕ್ಷೆ ಎಂಬ ಭಯ, ಒತ್ತಡದಿಂದ ಮೊದಲು ಹೊರ ಬನ್ನಿ. ಇಲ್ಲವಾದಲ್ಲಿ ನೀವು ಕಲಿತ ಎಲ್ಲ ಪಾಠಗಳು ಮರೆತು ಹೋಗಬಹುದು. ಎಂತಹ ಕಠಿಣ ಸಂದರ್ಭದಲ್ಲಿಯೂ ನೀವು ಕೀಳರಿಮೆ ಇಟ್ಟುಕೊಳ್ಳಬಾರದು. ಪೋಷಕರು ಕೂಡ ಮಕ್ಕಳ ಮೇಲೆ ನಂಬಿಕೆ ಇಡಬೇಕು ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್ , ಸುಚೀಂದ್ರ ,ಚಕ್ರಪಾಣಿ ,ಸತೀಶ್ ಗೌಡ, ಸ್ವರೂಪ್ ,ಕಡಕೊಳ ಜಗದೀಶ್ ,ಭರತೇಶ್ ಮತ್ತಿತರರು ಸ್ಥಳದಲ್ಲಿ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: