ದೇಶಪ್ರಮುಖ ಸುದ್ದಿ

ಕೊರೊನಾ ವೈರಸ್: ಭಾರತದಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆ

ನವದೆಹಲಿ,ಮಾ.4- ಭಾರತದಲ್ಲಿ ಒಟ್ಟು 28 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.

15 ಇಟಲಿ ಪ್ರಜೆಗಳು ಸೇರಿದಂತೆ ಭಾರತದಲ್ಲಿ ಇದುವರೆಗೂ ಒಟ್ಟು 28 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರವಹಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಎಲ್ಲಾ ಆಸ್ಪತ್ರೆಗಳಿಗೆ ಸೂಕ್ತ ಸಲಕರಣೆಗಳನ್ನು ಶೀಘ್ರದಲ್ಲೇ ವಿತರಿಸುವ ಭರವಸೆಯನ್ನೂ ನೀಡಿದ್ದಾರೆ.

ಮಧ್ಯೆ n95 ಮಾಸ್ಕ್ ದರಗಳನ್ನು ಕೆಲವರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಕುರಿತು ವರದಿಗಳು ಬಂದಿದ್ದು, ಒಂದು ವೇಳೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ, ಕೊರೊನಾ ವೈರಾಣು ಪತ್ತೆಯಾಗಿರುವ 15 ಜನ ಇಟಲಿ ಪ್ರಜೆಗಳನ್ನು ದೆಹಲಿಯ ವೈದ್ಯಕೀಯ ಕ್ಯಾಂಪ್ನಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಮೂರು ಮಂದಿ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ ಎಂದು ತಿಳಿಸಿದೆ.

ವೈರಾಣು ತಗುಲಿರುವವರನ್ನು ತೀವ್ರ ತಪಾಸಣೆಗೆ ಗುರಿ ಮಾಡಲಾಗಿದ್ದು, ಇದರ ಜೊತೆಗೆ ದೆಹಲಿಯಿಂದ ಇಟಲಿಗೆ ಹೋಗಿದ್ದ ಭಾರತೀಯನೋರ್ವ ಪ್ರಯಾಣಿಸಿದ್ದ ಏರ್ ಇಂಡಿಯಾ ಸಿಬ್ಬಂದಿ ಹಾಗೂ ಹೈದರಾಬಾದ್ ಟೆಕ್ಕಿ ಬೆಂಗಳೂರಿಗೆ ಪ್ರಯಾಣಿಸಿದ್ದ ಏರ್ ಇಂಡಿಯಾ ಸಿಬ್ಬಂದಿಯನ್ನು 14 ದಿನಗಳ ತಪಾಸಣೆಗೆ ಗುರಿ ಮಾಡಲಾಗಿದೆ.

ಕಳೆದ ತಿಂಗಳು ರಾಜಸ್ಥಾನ ಪ್ರವಾಸ ಕೈಗೊಂಡಿದ್ದ ತಂಡ, ದೆಹಲಿಗೆ ವಾಪಸ್ಸಾದ ಬಳಿಕ ನಡೆದ ತಪಾಸಣೆಯಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ. ಅಲ್ಲದೇ ತಂಡದೊಂದಿಗೆ ಪ್ರವಾಸ ಮಾಡಿದ್ದ ಓರ್ವ ಭಾರತೀಯ ವ್ಯಕ್ತಿಗೂ ಕೊರೊನಾ ವೈರಸ್ ಅಂಟಿಕೊಂಡಿದೆ.

ಮೂಲಕ ಇದುವರೆಗೂ ಒಟ್ಟು ಆರು ಭಾರತೀಯರಿಗೆ ಕೊರೊನಾ ವೈರಸ್ ತಗುಲಿದಂತಾಗಿದ್ದು, ಇಟಲಿ ಪ್ರಜೆಗಳ ರಾಜಸ್ಥಾನ ಪ್ರವಾಸ ಇದೀಗ ಸರ್ಕಾರಕ್ಕೆ ಭಾರೀ ಆತಂಕವನ್ನು ತಂದೊಡ್ಡಿದೆ. (ಎಂ.ಎನ್)

Leave a Reply

comments

Related Articles

error: