ಕರ್ನಾಟಕಪ್ರಮುಖ ಸುದ್ದಿ

ಸಿನಿಮೀಯ ರೀತಿಯಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿದ ಡಕಾಯಿತರು

ಚಿಕ್ಕಬಳ್ಳಾಪುರ: ಸಿನಿಮೀಯ ರೀತಿಯಲ್ಲಿ ಪೊಲೀಸರ ಮೇಲೆಯೇ ಡಕಾಯಿತರು ದಾಳಿ ನಡೆಸಿ, ಹತ್ಯೆ ಮಾಡಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ಗುಡಿಬಂಡೆ ತಾಲೂಕಿನ ತಟ್ಟಹಳ್ಳಿ ಕ್ರಾಸ್ ಬಳಿ  ಸೋಮವಾರ ತಡರಾತ್ರಿ ಬೆಂಗಳೂರಿನ ಮಹದೇವಪುರ ಪೊಲೀಸರು ಸಂಚರಿಸುತ್ತಿದ್ದ ಖಾಸಗಿ ಇನ್ನೋವಾ ಕಾರಿಗೆ ಡಕಾಯಿತರು ಹಿಂಬದಿಯಿಂದ ತಮ್ಮ ಮಾರುತಿ ಸಿಯಾಝ್ ಕಾರಿನಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ದರೋಡೆ ಪ್ರಕರಣವೊಂದರ ಸಂಬಂಧ ಬಾಗೇಪಲ್ಲಿ ಮೂಲದ ಗಿರೀಶ್ ಹಾಗೂ ಪ್ರಸಾದ್ ಎಂಬವರನ್ನು ಬಂಧಿಸಲು ಪೊಲೀಸರು ಬೆಂಗಳೂರು ನಗರದಿಂದ ಬರುತ್ತಿದ್ದ  ಮಾಹಿತಿ ತಿಳಿದು ಡಕಾಯಿತರ ಗ್ಯಾಂಗ್ ಪೊಲೀಸರಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಲು ಯೋಜನೆ ರೂಪಸಿತ್ತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಇನ್ನೋವಾ ಕಾರು ಪಲ್ಟಿಯಾಗಿದೆ. ಇನ್ನೋವಾ ಕಾರಿನಲ್ಲಿದ್ದ ಪೊಲೀಸರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಅಪಘಾತದ ನಂತರ ಡಕಾಯಿತರ ಕಾರು ಸ್ವಲ್ಪ ದೂರದಲ್ಲಿ ಕೆಟ್ಟು ನಿಂತಿದ್ದು, ಕಾರು ಬಿಟ್ಟು ಡಕಾಯಿತರು ಪರಾರಿಯಾಗಿದ್ದಾರೆ. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: