ಮೈಸೂರು

ಸರ್ಕಾರದ ಆಸ್ತಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಮಾ.5:- ಸರ್ಕಾರದ ಆಸ್ತಿ ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ನಂಜನಗೂಡು ಮಾದನಹಳ್ಳಿಯ ಸಮಾಜ ಸೇವಕ ಗಿರೀಶ್ ಎಂಬವರು ಕುಟುಂಬ ಸಮೇತ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ  ನಡೆಸಿದರು.

ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಗಿರೀಶ್ ಮಾತನಾಡಿ ನಂಜನಗೂಡು ಹುಲ್ಲಹಳ್ಳಿ ಹೋಬಳಿಯ ಮಾದನಹಳ್ಳಿ ಗ್ರಾಮದ ಸರ್ವೆ ನಂಬರ್ 12/1,12/2,13/1A 1A 1/20 ಗುಂಟೆ ಜಮೀನನ್ನು ಶಿವಣ್ಣ, ಮಲ್ಲಿಕಾರ್ಜುನ, ಬಸವರಾಜು, ಮಹದೇವಪ್ಪ ಎಂಬವರು ಹಾಲಿ ಮತ್ತು ಮಾಜಿ ಗ್ರಾಮಪಂಚಾಯತ್ ನ ಸದಸ್ಯರಾಗಿದ್ದು ಪ್ರಬಲ ರಾಜಕೀಯ ಹಣ ಬಲ ಹೊಂದಿದ್ದಾರೆ. ಸರ್ಕಾರ ಬಡವರಿಗೆ ಮನೆ ಕಟ್ಟಲು ಕೊಟ್ಟಿರುವ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಕಳೆದ ನವೆಂಬರ್ 16ರಂದು ನಮ್ಮ ಕುಟುಂಬ ಜಿಲ್ಲಾಧಿಕಾರಿಗಳ ಕಛೇರಿ ಎದುರು ಹೋರಾಟ ಮಾಡಿತ್ತು. ಆದರೆ ಉಪವಿಭಾಗದ ಅಧಿಕಾರಿ ತಹಶೀಲ್ದಾರ್ ಅವರು 22/11/2019ರಂದು ಗ್ರಾಮಕ್ಕೆ ತೆರಳಿ ಸರಿಯಾಗಿ ಪರಿಶೀಲಿಸದೇ ಒಂದು ಬಿಳಿಯ ಕಾಗದದ ಮೇಲೆ ನಮಗೆ ಮನೆ ಕಟ್ಟಲು ಅನುಮತಿ ಮಾಡಿ ಕೊಟ್ಟಿರುತ್ತಾರೆ. ಅದರಲ್ಲೂ ಮನಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. 50ವರ್ಷಗಳಿಂದ ಒತ್ತುವರಿ ಮಾಡಿಕೊಂಡು ಬಂದಿದ್ದರೂ ಅಳತೆ ಮಾಡದೇ ಸರ್ಕಾರಿ ಜಾಗದಲ್ಲಿ ಒತ್ತುವರಿದಾರರ ಮಾತಿನಂತೆ ಹಿಂದಿನ ದಿನಗಳಲ್ಲಿ ಜಾಗ ತೆರವುಗೊಳಿಸುತ್ತೇವೆ ಎಂದು ಅವರಿಗೆ ಮನೆ ಕಟ್ಟಲು ಹೇಳಿಕೆ ನೀಡಿರುತ್ತಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಬಡವರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಿ ಮನೆ ಕಟ್ಟುವುದನ್ನು ನಿಲ್ಲಿಸಬೇಕೆಂದು ಹಾಗೂ ನ್ಯಾಯ ಸಿಗುವ ರೀತಿ ಮಾಡಬೇಕೆಂದು ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: