ಕರ್ನಾಟಕಮನರಂಜನೆ

ಶ್ರೀರಾಮುಲು ಮಗಳ ಮದುವೆಯಲ್ಲಿ ಕಿಚ್ಚ ಸುದೀಪ್

ಬೆಂಗಳೂರು,ಮಾ.5-ಸಚಿವ ಶ್ರೀರಾಮುಲು ಅವರ ಪುತ್ರಿ ರಕ್ಷಿತಾ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗೆಳೆಯನ ಮಗಳ ಮದುವೆಗೆ ಆಗಮಿಸಿದ ನಟ ಕಿಚ್ಚ ಸುದೀಪ್ ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಅದ್ಧೂರಿ ವಿವಾಹ ಮಹೋತ್ಸವದಲ್ಲಿ ರಕ್ಷಿತಾ ಅವರನ್ನು ಹೈದರಾಬಾದ್ ಮೂಲದ ಉದ್ಯಮಿ ಲಲಿತ್ ಸಂಜೀವ್ ರೆಡ್ಡಿ ವರಿಸಿದರು.

ಸುದೀಪ್ ಅವರು ವಧು-ವರರ ಜೊತೆ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿತ್ರದಲ್ಲಿ ಶ್ರೀರಾಮುಲು ಸಹ ಜೊತೆಗಿದ್ದಾರೆ. ನೀಲಿ ಬಣ್ಣದ ಕುರ್ತಾದಲ್ಲಿ ಸುದೀಪ್ ಮಿರಿ-ಮಿರಿ ಮಿಂಚುತ್ತಿದ್ದಾರೆ.

ನಟ ಕಿಚ್ಚ ಸುದೀಪ್ ಹಾಗೂ ಶ್ರೀರಾಮುಲು ಇಬ್ಬರು ಉತ್ತಮ ಸ್ನೇಹಿತರು. ಹಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ವೇದಿಕೆ ಸಹ ಹಂಚಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಶ್ರೀರಾಮುಲು ವಿರುದ್ಧ ಸುದೀಪ್ ಪ್ರಚಾರ ಮಾಡಲು ನಿರಾಕರಿಸಿದ್ದರು. ಇದು ಇಬ್ಬರ ನಡುವಿನ ಸ್ನೇಹಕ್ಕೆ ಉದಾಹರಣೆಯಾಗಿತ್ತು. (ಎಂ.ಎನ್)

Leave a Reply

comments

Related Articles

error: