ಲೈಫ್ & ಸ್ಟೈಲ್

ಎಳನೀರು ಸೇವಿಸಿ ರೋಗದಿಂದ ದೂರವಿರಿ !

ಎಳನೀರು ಕುಡಿಯುವುದರಿಂದ ಹಲವು ರೋಗಗಳಿಗೆ ಔಷಧ ದೊರೆತಂತಾಗುತ್ತದೆ. ಇದರಲ್ಲಿ ಹಲವು ನ್ಯೂಟ್ರಿಆ್ಯಂಟ್ಸ್ ಗಳು ಇದ್ದು ಇದು ಶರೀರವನ್ನು ಸುದೃಢವಾಗಿರಿಸುತ್ತದೆ. ಅದರಲ್ಲೂ ಈಗಂತು ಬಿಸಿಲಿನ ಝಳಕ್ಕೆ ಕಳಪೆ ಪಾನೀಯಗಳನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ಎಳನೀರು ಸೇವಿಸಿ ರೋಗದಿಂದ ದೂರವಿರುವುದು ಒಳ್ಳೆಯದು. ವಾರಕ್ಕೆ ಒಂದು ದಿನ ಎಳನೀರು ತಪ್ಪದೇ ಸೇವಿಸಿ.

ಉರಿಮೂತ್ರ ತಡೆ : ಇದರಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್ ಇದ್ದು, ಯೂರಿನ ಇನ್ ಫೆಕ್ಷನ್ ಆಗುವುದನ್ನು ತಪ್ಪಿಸಲಿದೆ.

ಶಕ್ತಿ ಹೆಚ್ಚಳ  : ಇದರಲ್ಲಿರುವ ಇಲೆಕ್ಟ್ರೋಲೈಟ್ಸ್ ನಿಂದ ಶರೀರಕ್ಕೆ ಶಕ್ತಿ ದೊರಕಲಿದೆ

ಕಲ್ಮಶ ಹೊರಕ್ಕೆ  : ಎಳನೀರು ಶರೀರದಲ್ಲಿನ ಕಲ್ಮಶವನ್ನು ಹೊರಹಾಕುತ್ತದೆ. ಇದನ್ನು ಸೇವಿಸುವುದರಿಂದ ಮೂತ್ರಪಿಂಡ, ಮೂತ್ರಾಶಯ, ಲಿವರ್ ಗೆ ಸಂಬಂಧಿಸಿದ ರೋಗಗಳು ದೂರವಾಗುತ್ತವೆ.

ಹೊಟ್ಟೆಯ ಸಮಸ್ಯೆ ನಿವಾರಣೆ : ಇದರಲ್ಲಿನ ಫೈಬರ್ಸ್ ಗಳು ಆ್ಯಸಿಡಿಟಿ ಹಾಗೂ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲಿದೆ.

ತಲೆನೋವು ಶಮನ : ಇದು ಶರೀರವನ್ನು ಹೈಡ್ರೇಟ್ ಮಾಡುವುದರಿಂದ ತಲೆನೋವಿನ ಸಮಸ್ಯೆ ನಿವಾರಣೆಯಾಗಲಿದೆ.

ಗರ್ಭಿಣಿ  ಸ್ತ್ರೀಯರಿಗೆ ಸಹಾಯಕ : ಇದರಲ್ಲಿ ರಾಯಿಬೊಪ್ಲೆವಿನ್ ಮತ್ತು ವಿಟಾಮಿನ್ ಸಿ ಇರುವುದರಿಂದ ಗರ್ಭಿಣಿ ಸ್ತ್ರೀಯರಿಗೆ ಸಹಾಯಕವಾಗಲಿದೆ.

ತೂಕ ಕಡಿಮೆ : ಇದರಲ್ಲಿ ಕ್ಯಾಲರಿ ಅಂಶ ಕಡಿಮೆ ಇರುವುದರಿಂದ ತೂಕ ಕಡಿಮೆ ಮಾಡುವಲ್ಲಿ ಸಹಕಾರಿಯಾಗಲಿದೆ.

ಎಲುಬು ಗಟ್ಟಿಯಾಗಲಿದೆ : ಇದರಲ್ಲಿ ಕ್ಯಾಲ್ಶಿಯಂ ಮತ್ತು ಫಾಸ್ಫೋರಸ್ ಅಂಶಗಳಿರುವುದರಿಂದ ಎಲುಬುಗಳು ಗಟ್ಟಿಯಾಗಲಿವೆ. (ಎಸ್-ಎಚ್)

Leave a Reply

comments

Related Articles

error: