ಕ್ರೀಡೆ

ಪಂದ್ಯವನ್ನು ಅರ್ಧಕ್ಕೆ ಬಿಟ್ಟು ಪತ್ನಿಯ ಫೈನಲ್  ಪಂದ್ಯವನ್ನು ನೋಡಲು ಹೊರಟಿದ್ದಾರಂತೆ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ !

ವಿದೇಶ(ಮೆಲ್ಬರ್ನ್)ಮಾ.7:-  ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ನ ಫೈನಲ್ ಪಂದ್ಯ ಭಾನುವಾರ ನಡೆಯಲಿದೆ. ಪ್ರಶಸ್ತಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ನಡುವೆ ಹಣಾಹಣಿ ನಡೆಯಲಿದೆ.

ಎಲಿಸಾ ಹೀಲಿಯು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರು ಇನ್ನಿಂಗ್ಸ್ ಅನ್ನು ಸಹ ಪ್ರಾರಂಭಿಸುತ್ತಾರೆ. ಎಲಿಸಾ ಹೀಲಿಯ ಪತಿ ಮಿಚೆಲ್ ಸ್ಟಾರ್ಕ್ ಈ ಕ್ಷಣಕ್ಕೆ ಸಾಕ್ಷಿಯಾಗಲು ಕಾತುರರಾಗಿದ್ದಾರಂತೆ.

ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಪ್ರಸ್ತುತ ದಕ್ಷಿಣ ಆಫ್ರಿಕಾ ಜೊತೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದಾರೆ. ಸರಣಿಯಲ್ಲಿ ಆಸ್ಟ್ರೇಲಿಯಾ 0-2 ಹಿಂದುಳಿದಿದೆ. ಇದರ ಹೊರತಾಗಿಯೂ, ಸ್ಟಾರ್ಕ್ ತನ್ನ ತಂಡವನ್ನು ತೊರೆದು ಆಸ್ಟ್ರೇಲಿಯಾಕ್ಕೆ ಮರಳಲು ತಯಾರಿ ನಡೆಸಿದ್ದಾರೆ. ಮಹಿಳಾ ಟಿ 20 ವಿಶ್ವಕಪ್ ಫೈನಲ್‌ನಲ್ಲಿ ಪತ್ನಿ ಎಲಿಸಾ ಹೀಲಿಯ ಆಟವನ್ನು ವೀಕ್ಷಿಸಲು ದಕ್ಷಿಣ ಆಫ್ರಿಕಾದ ಪ್ರವಾಸವನ್ನು ಮಧ್ಯದಲ್ಲಿಯೇ ಬಿಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: