ಪ್ರಮುಖ ಸುದ್ದಿ

ಕೊರೊನಾ ವೈರಸ್ ಬಗ್ಗೆ ಜಾಗೃತಿ : ಜಿಯೋ, ಬಿಎಸ್‌ಎನ್‌ಎಲ್ ಸಂಖ್ಯೆಗಳಿಗೆ ಕರೆ ಮಾಡಿದಾಗ ಕೇಳಿ ಬರಲಿದೆ ಸಂದೇಶ

ದೇಶ(ನವದೆಹಲಿ)ಮಾ.7;-   ವಿಶ್ವದ 60 ಕ್ಕೂ ಹೆಚ್ಚು ದೇಶಗಳಲ್ಲಿ ಆತಂಕ ಸೃಷ್ಟಿಸಿದ ಮಹಾಮಾರಿ ಕೊರೋನಾ ವೈರಸ್ ಕುರಿತಂತೆ  ಭಾರತದಲ್ಲಿಯೂ ಜನರು ಭಯಭೀತರಾಗಿದ್ದಾರೆ. ದೇಶದಲ್ಲಿ 31 ಮಂದಿಗೆ ಕೊರೋನಾ ಇರುವುದು ಪತ್ತೆಯಾದ ನಂತರ    ಸರ್ಕಾರ ಮುನ್ನೆಚ್ಚರಿಕೆ ವಹಿಸುತ್ತಿದೆ. ಅದಕ್ಕಾಗಿಯೇ ಜಿಯೋ ಮತ್ತು ಬಿಎಸ್ಎನ್ಎಲ್ ಸಂಖ್ಯೆಗಳಿಗೆ ಕರೆ ಮಾಡಿದಾಗ ಕೊರೋನಾದಿಂದ ಪಾರಾಗುವ  ಕುರಿತು ಜಾಗೃತಿ ಸಂದೇಶವನ್ನು ಕೇಳಿಸಲಾಗುತ್ತದೆ.

ಕೊರೋನಾ ವೈರಸ್ (ಕೋವಿಡ್ -19) ಬಗ್ಗೆ ಜನರಿಗೆ ಅರಿವು ಮೂಡಿಸಲು ಮೊದಲೇ ರೆಕಾರ್ಡ್ ಮಾಡಿದ ಸಂದೇಶವನ್ನು ಕೇಳಿಸಲಾಗುತ್ತದೆ. ಇದರಲ್ಲಿ ಮೊದಲು ಕೆಮ್ಮಿನ ಶಬ್ದ  ಕೇಳುತ್ತದೆ. ನಂತರ ಒಂದು ಧ್ವನಿ ಬರುತ್ತದೆ   ನೀವು ಕೊರೋನಾ ವೈರಸ್ ಹರಡುವುದನ್ನು ನಿಲ್ಲಿಸಬಹುದು. ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿ. ನಿಮಗೆ ಉಸಿರಾಟ, ಜ್ವರ ಅಥವಾ ಕಫದ ತೊಂದರೆ ಇದ್ದರೆ ನಿಮ್ಮ ಮೂಗು, ಬಾಯಿ ಮತ್ತು ಕಣ್ಣುಗಳನ್ನು ನೇರವಾಗಿ ಮುಟ್ಟಬೇಡಿ.

ಅವರಿಂದ 1 ಮೀಟರ್ ಗಿಂತ ಹೆಚ್ಚು ದೂರ ಅಂತರ ಕಾಯ್ದುಕೊಳ್ಳಿ. ನಿಮ್ಮ ಕೈಗಳನ್ನು ಸಾಬೂನಿನಿಂದ ನಿರಂತರವಾಗಿ ತೊಳೆಯಿರಿ. ಈ ಸಂದೇಶ  ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೇಳಿಸಲಾಗುತ್ತಿದೆ. ಈ ಫ್ರೀಕಾಲ್  ಮೆಸೇಜ್ ನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊರೋನಾ ವೈರಸ್‌ನಿಂದ ಜನರನ್ನು ರಕ್ಷಿಸುವುದೇ ಇದರ ಉದ್ದೇಶವಾಗಿದೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: