ಮೈಸೂರು

ಸರ್ಕಾರಿ ಬಸ್ ಹಾಗೂ ಮೊಪೆಡ್ ನಡುವೆ ಅಪಘಾತ : ಶಿಕ್ಷಕಿ ಸ್ಥಳದಲ್ಲೇ ಸಾವು

ಮೈಸೂರು,ಮಾ.7:- ಸರ್ಕಾರಿ ಬಸ್ ಹಾಗೂ ಮೊಪೆಡ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಮೊಪೆಡ್ ಬೈಕ್ ನಲ್ಲಿದ್ದ ಶಿಕ್ಷಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಗೌಡೇನಹಳ್ಳಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಶಿಕ್ಷಕಿ ತಾರ (52 ) ಎಂದು ಗುರುತಿಸಲಾಗಿದ್ದು,   ಮಾವತ್ತೂರು ಪ್ರೌಢಶಾಲೆ ಮುಖ್ಯ ಶಿಕ್ಷಕಿಯಾಗಿದ್ದರು. ಸರ್ಕಾರಿ ಬಸ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: