ಮೈಸೂರು

ಮಹಿಳೆಯರು ಕೀಳರಿಮೆಯಿಂದ ಹೊರಬರಬೇಕು : ಸುಧಾ ಫಣೀಶ್

ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ವಿಶ್ವ ಮಹಿಳಾ ದಿನಾಚರಣೆ

ಮೈಸೂರು,ಮಾ.8:- ಭಾರತೀಯ ಜನತಾ ಪಕ್ಷದ ಚಾಮುಂಡೇಶ್ವರಿ (ನಗರ) ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಇಂದು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ರಾಮಕೃಷ್ಣನಗರದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ವಿವಿಧ  ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಅದರಲ್ಲಿಯೂ ಶ್ರಮಿಕ ವರ್ಗದವರಾದ ಸೊಪ್ಪು ಮಾರುವ ಶಿವಲಿಂಗಮ್ಮ, ಹೂವು ಮಾರುವ ಗಂಗಮ್ಮ, ಮನೆಗೆಲಸ ಮಾಡುವ ಪದ್ಮಾವತಿ, ಆಧ್ಯಾತ್ಮಿಕ ಸಂಘಟನೆಯ ರಾಜೇಶ್ವರಿ ಅವರನ್ನು  ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯೆ ಸುಧಾ ಫಣೀಶ್  ಮಾತನಾಡಿ “ಮಹಿಳೆಯರು ಕೀಳರಿಮೆಯಿಂದ ಹೊರಬರಬೇಕು, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುವ ಅವಕಾಶಗಳು ಮುಕ್ತವಾಗಿದೆ, ಅವುಗಳನ್ನು ಬಳಸಿಕೊಂಡು ಸಾಧನೆ ಮಾಡುವತ್ತ ಹೆಜ್ಜೆ ಇಡಬೇಕಿದೆ. ಮಹಿಳಾ ಮೀಸಲಾತಿ ಕಲ್ಪನೆ ಸದ್ಬಳಕೆಯಾಗಬೇಕಿದೆ, ಗಂಡನ ಹೆಸರಿನಿಂದ ನಗರಸಭೆ, ಪುರಸಭೆ, ನಗರ ಪಾಲಿಕೆ ಸದಸ್ಯರಾಗುವ ಬದಲು ಸ್ವಂತ ಬಲದಿಂದ ಸ್ಥಾನ ಪಡೆಯಬೇಕಿದೆ ಎಂದು ನುಡಿದರು.

ಬಿಜೆಪಿ ಚಾಮುಂಡೇಶ್ವರಿ(ನಗರ) ಮಂಡಲದ ಅಧ್ಯಕ್ಷರಾದ ಬಿ.ಎಂ. ರಘು   ಮಾತನಾಡಿ “ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಬಚಾವೋ ಬೇಟಿ ಪಢಾವೋ ಆಂದೋಲನ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಭಾಗ್ಯಲಕ್ಷ್ಮಿ ಯೋಜನೆ, ಮೀನುಗಾರ ಮಹಿಳೆಯರಿಗೆ ಸ್ಕೂಟರ್ ನೀಡುವ ಯೋಜನೆ, ಸಣ್ಣ ಉದ್ದಿಮೆ ಸಾಲ ನೀಡುವಿಕೆ ಹೀಗೆ ಮಹಿಳೆಯರ ಸಬಲೀಕರಣಕ್ಕಾಗಿಯೇ ಹಲವಾರು ಯೋಜನೆಗಳಿದ್ದು ಅದರ ಪ್ರಯೋಜನ ಪಡೆಯಬೇಕಿದೆ. ಈ ಎಲ್ಲ ಸವಲತ್ತುಗಳನ್ನು ಜನರಿಗೆ ತಲುಪಿಸುವತ್ತ ಚಾಮುಂಡೇಶ್ವರಿ(ನಗರ) ಮಂಡಲವು ಕೆಲಸ ಮಾಡಲಿದೆ  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಚಾಮುಂಡೇಶ್ವರಿ (ಗ್ರಾಮಾಂತರ) ಅಧ್ಯಕ್ಷರಾದ ಗೆಜ್ಜಗಳ್ಳಿ ಮಹೇಶ್, ಮಂಡಲದ ಉಪಾಧ್ಯಕ್ಷೆ ವಿಜಯ ಮಂಜುನಾಥ್, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶುಭಾಶ್ರೀ, ಮಹಿಳಾ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಲಕ್ಷ್ಮಿದೇವಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಾಜಮಣಿ, ಈರೇಗೌಡ, ಯುವಮೋರ್ಚಾ ಅಧ್ಯಕ್ಷ ರಾಕೇಶ್ ಭಟ್, ಎಸ್ಸಿ ಮೋರ್ಚಾದ ಭಾಗ್ಯ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಸ್ಟೀಫನ್ ಸುಜಿತ್, ಮುಖಂಡರಾದ ರವಿಕುಮಾರ್, ಸಿದ್ದೇಶ್, ಗಿರೀಶ್, ಅಮೃತ, ಎಸ್ತಾರ್ ಸೇರಿದಂತೆ 60ಕ್ಕೂ ಅಧಿಕ ಸ್ಥಳೀಯ ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: