ಮೈಸೂರು

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆ : ವಿಶ್ವ ಮಹಿಳಾ ದಿನಾಚರಣೆಯಂದೇ  ಹುಣಸೂರಿನಲ್ಲಿ ಮನ ಕಲಕುವ ಘಟನೆ

ಮೈಸೂರು,ಮಾ.8:-  ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗರ್ಭಿಣಿಯೋರ್ವರು ವಿಶ್ವ ಮಹಿಳಾ ದಿನಾಚರಣೆಯಂದೇ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಕಲ್ಕುಣಿಕೆಯಲ್ಲಿ ನಡೆದಿದೆ.

ಮೃತರನ್ನು ಲಕ್ಷ್ಮೀ( 23) ಎಂದು ಗುರುತಿಸಲಾಗಿದೆ. ಇವರು ನಂಜನಗೂಡು ತಾಲೂಕು ಮಂಚಳ್ಳಿ ಗ್ರಾಮದ ನಿವಾಸಿಯಾಗಿದ್ದು, 10 ತಿಂಗಳ ಹಿಂದೆ ಹುಣಸೂರಿನ ಯೋಗೇಶ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ವೇಳೆ ಲಕ್ಷ್ಮಿ ಪೋಷಕರು 50 ಲಕ್ಷ ವರದಕ್ಷಿಣೆ , 400 ಗ್ರಾಂ ಚಿನ್ನ ನೀಡಿದ್ದರು. ಒಂದು ನಿವೇಶನ ನೀಡಲು ಒಪ್ಪಿಕೊಂಡಿದ್ದರು. ಆದರೆ ನಿವೇಶನ ನೀಡುವುದು ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಲಕ್ಷ್ಮಿಗೆ ಕಿರುಕುಳ ಆರೋಪ ನೀಡಿದ್ದು, ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು ಲಕ್ಷ್ಮಿ ನೇಣಿಗೆ ಶರಣಾಗಿದ್ದಾರೆಂದು ಲಕ್ಷ್ಮಿ ಪೋಷಕರು ಆರೋಪಿಸಿದ್ದಾರೆ.

ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: