ಪ್ರಮುಖ ಸುದ್ದಿ

 ಹಿಂದೂ ಜನಜಾಗೃತಿ ಸಭೆ : ದೇಶದ್ರೋಹಿ ಕುಕೃತ್ಯಗಳಿಂದ ಭಾರತ ಮಾತೆ ವನವಾಸ ಅನುಭವಿಸುತ್ತಿದ್ದಾಳೆ : ದೀಪಾ ತಿಲಕ್ ವಿಷಾದ

ರಾಜ್ಯ(ಮಡಿಕೇರಿ) ಮಾ.9 :- ಹಿಮಾಲಯ ಪರ್ವತ ಶ್ರೇಣಿಯಿಂದ ವಿಶಾಲ ಹಿಂದೂ ಮಹಾ ಸಾಗರದ ವರೆಗಿನ ಭೂಮಿ ಭಾರತ ಮಾತೆಯ ತಪೋ ನೆಲವಾಗಿದ್ದು, ಭಾರತ ಮಾತೆ ನೆಲೆನಿಂತ ನಾಡು ಹಿಂದೂಸ್ಥಾನವಾಗಿ ಗುರುತಿಸಿಕೊಂಡಿದೆ. ಆದರೆ ಇಂದು ಗೋಹತ್ಯೆ, ಮತಾಂತರ, ಲವ್ ಜಿಹಾದ್ ನಂತಹ ಕೃತ್ಯಗಳು ನಡೆಯುತ್ತಿದ್ದು ಭಾರತ ಮಾತೆ ವನವಾಸ ಅನುಭವಿಸುತ್ತಿದ್ದಾಳೆ ಎಂದು ಸನಾತನ ಸಂಸ್ಥೆಯ ಧರ್ಮ ಪ್ರಚಾರಕಿ ದೀಪಾ ತಿಲಕ್ ವಿಷಾದ ವ್ಯಕ್ತಪಡಿಸಿದರು.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ಮಡಿಕೇರಿಯ ಓಂಕಾರ ಸದನದಲ್ಲಿ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಪಾಲ್ಗೊಂಡು ಸನಾತನ ಹಿಂದೂ ಧರ್ಮ ಮತ್ತು ಹಿಂದೂ ರಾಷ್ಟ್ರದ ಪರಿಕಲ್ಪನೆ ಬಗ್ಗೆ ಪ್ರವಚನ ನೀಡಿದ ದೀಪಾ ತಿಲಕ್, ಸನಾತನ ಸಂಸ್ಥೆ ಹಿಂದೂಗಳಲ್ಲಿ ಧರ್ಮ ಜಾಗೃತಿಯ ಬಗ್ಗೆ ಪ್ರಚಾರ ನಡೆಸಿ ಅವರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ಇದನ್ನು ಸಹಿಸದ ಕೆಲವು ಶಕ್ತಿಗಳು ಸನಾತನ ಸಂಸ್ಥೆಯ ವಿರುದ್ದ ಅಪ ಪ್ರಚಾರ ನಡೆಸುವ ಮೂಲಕ ಸಂಸ್ಥೆಯನ್ನು ನಿರ್ಬಂಧ ಹೇರಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು.

ಸಂತರು ಗುರುಕುಲಗಳ ಮೂಲಕ ಅಂದಿನ ಪೀಳಿಗೆಗೆ ಶ್ರೇಷ್ಟ ಹಿಂದೂ ಸಂಸ್ಕøತಿಯನ್ನು ದಾರೆ ಎರೆದು ಶ್ರೇಷ್ಟ  ವ್ಯಕ್ತಿಗಳನ್ನಾಗಿ ರೂಪಿಸಿದ್ದರು. ಆದರೆ ತದ ನಂತರದ ಪಾಶ್ಚಿಮಾತ್ಯ ಶಿಕ್ಷಣ ವ್ಯವಸ್ಥೆ ಧರ್ಮ ಜಾಗೃತಿ ಮೂಡಿಸುವಲ್ಲಿ ವಿಫಲವಾಯಿತು. ಇದರಿಂದಾಗಿ ಹಿಂದೂವಿಗೆ ತನ್ನ ಧರ್ಮದ ಬಗ್ಗೆಯೇ ಅರಿವಿಕೆ ಇಲ್ಲದಂತಾಗಿದ್ದರೂ ಇಂದು ಬದಲಾವಣೆಯ ಗಾಳಿ ಬೀಸುತ್ತಿದೆ. ರಾಮ ಮಂದಿರ ನಿರ್ಮಾಣ, ಆರ್ಟಿಕಲ್ 370 ರದ್ದು, ಕಾಶ್ಮೀರದ ಸ್ವಾಯತ್ತತೆ ಸೇರಿದಂತೆ ಅಮೂಲಾಗ್ರ ಬದಲಾವಣೆಗಳಾಗುತ್ತಿದೆ. ಹೀಗಾಗಿಯೇ 2023ರಲ್ಲಿ ಭಾರತ ದೇಶ ಶ್ರೇಷ್ಟ ಹಿಂದೂ ರಾಷ್ಟ್ರವಾಗಿ ಮಾರ್ಪಡಲಿದೆ. ಪ್ರತಿಯೊಬ್ಬರೂ ಕೂಡ ಈ ಕಾರ್ಯಕ್ಕೆ ಕೈಜೋಡಿಸಬೇಕೆಂದು ದೀಪಾ ತಿಲಕ್ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಕೀಲ ಪಿ. ಕೃಷ್ಣಮೂರ್ತಿ, ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖ್ ಆದ ಶಿವರಾಮ್ ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಪಿ.ಎಂ. ರವಿಚಂದ್ರ ಅವರು ಸಮಿತಿ ಕಳೆದ ಹತ್ತು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿರುವ ಧರ್ಮ ಸಭೆಗಳ ಬಗ್ಗೆ ಮಹಿತಿ ನೀಡಿದರು. ವೇದಮೂರ್ತಿಗಳಾದ ಉದಯ್ ಕುಮಾರ್ ಮತ್ತು ಸುಬ್ರಮಣ್ಯ ಕುಮಾರ್ ವೇದ ಮಂತ್ರ ಪಠಿಸಿದರು.

ಸಭಾಂಗಣದಲ್ಲಿ ಹಿಂದೂ ಧರ್ಮದ ಕುರಿತ ವಿವಿಧ ಆಚರಣೆಗಳ ಭಿತ್ತಿ ಫಲಕಗಳನ್ನು ಅನಾವರಣ ಮಾಡಲಾಗಿತ್ತು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: