ಮೈಸೂರು

ಬಿಜೆಪಿ ಮುಖಂಡ ಎಸ್.ಆನಂದ ಹತ್ಯೆ ಪ್ರಕರಣ : ತನಿಖೆ ಚುರುಕುಗೊಳಿಸಿದ ಪೊಲೀಸರು ; ಪ್ರಮುಖ ಆರೋಪಿ ನ್ಯಾಯಾಲಯಕ್ಕೆ ಶರಣು

ಮೈಸೂರು,ಮಾ.9:- ಹುಟ್ಟುಹಬ್ಬದಂದೇ ಬರ್ಬರವಾಗಿ ಹತ್ಯೆಯಾದ ಬಿಜೆಪಿ ಮುಖಂಡ ಎಸ್.ಆನಂದ ಅಲಿಯಾಸ್ ವಡ್ಡ ಆನಂದ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

ಹತ್ಯೆಯ ಪ್ರಮುಖ ಆರೋಪಿ ಬಸವರಾಜು ಶನಿವಾರ ಮೈಸೂರು ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾನೆ. ಈಗ ನ್ಯಾಯಾಂಗ ಬಂಧನದಲ್ಲಿದ್ದು, ಇಂದು ಪೊಲೀಸರು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ವಿಶೇಷ ತನಿಖಾ ತಂಡ ರಚಿಸಿ ತಲೆಮರೆಸಿಕೊಂಡಿರುವ ಇನ್ನೂ ಐವರು ಹಂತಕರ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ. ಕುವೆಂಪುನಗರ ಠಾನೆ ಇನ್ಸಪೆಕ್ಟರ್ ರಾಜು ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೈಸೂರಿನ ಕುವೆಂಪು ನಗರದ ಲವ ಕುಶ ಪಾರ್ಕ್ ಬಳಿಯ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಮಾ.5ರ ತಡರಾತ್ರಿ ಸ್ನೇಹಿತರಿಂದಲೇ ಬರ್ಬರವಾಗಿ ಬಿಜೆಪಿ ಮುಖಂಡ ಎಸ್.ಆನಂದ ಅಲಿಯಾಸ್ ವಡ್ಡ ಆನಂದ ಹತ್ಯೆ ನಡೆದಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: