ಮೈಸೂರು

ಮೈಸೂರು ಎಪಿಎಂಸಿಯಲ್ಲಿನ ತರಕಾರಿ ಮಾರುಕಟ್ಟೆಯ ಮೇಲೆಯೂ ಕೊರೋನಾ ವೈರಸ್  ಎಫೆಕ್ಟ್ : ಕುಸಿದ ತರಕಾರಿ ಬೆಲೆ

ಮೈಸೂರು,ಮಾ.9:- ಕೊರೋನಾ ವೈರಸ್  ಎಫೆಕ್ಟ್ ಮೈಸೂರು ಎಪಿಎಂಸಿಯಲ್ಲಿಯಲ್ಲಿನ ತರಕಾರಿ ಮಾರುಕಟ್ಟೆಯ ಮೇಲೆಯೂ ಪರಿಣಾಮ ಬೀರಿದ್ದು,  ತರಕಾರಿ ಬೆಲೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಮಾರ್ಚ್ 5 ರಿಂದ ತರಕಾರಿ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಕಳೆದ ನಾಲ್ಕು ದಿನದಿಂದ ಬೆಲೆ ಕಡಿಮೆಯಾಗುತ್ತಿರುವುದನ್ನು ಕಂಡು ರೈತರು ಆತಂಕವ್ಯಕ್ತಪಡಿಸಿದ್ದಾರೆ. ವಾರದ ಹಿಂದೆ ಇದ್ದ ಬೆಲೆಗೂ ಈಗಿನ ಬೆಲೆಗೂ ಶೇಕಡಾ 70% ರಷ್ಟು ಇಳಿಕೆಯಾಗಿದೆ. ಟೊಮೋಟೊ ಕೆಜಿಗೆ 5ರೂ, ಕೋಸು ಕೆಜಿಗೆ 3ರೂ,ಈರುಳ್ಳಿ10ರೂ, ಬೆಂಡೆಕಾಯಿ 14ರೂ, ಬದನೆಕಾಯಿ 3ರೂ.  ಸೇರಿದಂತೆ ಎಲ್ಲಾ ತರಕಾರಿಗಳಲ್ಲಿ ಬೆಲೆಗಳೂ ಇಳಿಮುಖವಾಗಿದೆ. ಕೊರೊನಾ ವೈರಸ್  ಎಫೆಕ್ಟ್ ನಿಂದ ಅಲರ್ಟ್ ಆದ ಎಪಿಎಂಸಿ ರೈತರ ಜೊತೆ ಸಭೆ ನಡೆಸಲು ನಿರ್ಧರಿಸಿದೆ. ರೈತರು, ದಲ್ಲಾಳಿಗಳು,ವರ್ತಕರ ಜೊತೆ ಸಭೆ ನಡೆಸಲು ನಿರ್ಧರಿಸಿದ್ದಾರೆ. ನಾಳೆ ಸಭೆ ನಡೆಸಲು ಎಪಿಎಂಸಿ ಅಧ್ಯಕ್ಷ ಕೆ ಪ್ರಭುಸ್ವಾಮಿ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: