ಮೈಸೂರು

ಪತ್ನಿಯನ್ನು ಕೊಲೆಗೈದು ನೇಣು ಹಾಕಿದ ಭೂಪ

ಪತ್ನಿಯ ಶೀಲವನ್ನು ಶಂಕಿಸಿ ಪತಿಯೇ ಪತ್ನಿಯನ್ನು ಕೊಲೆಗೈದು ನೇಣು ಹಾಕಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಅಂಕನಹಳ್ಳಿ ನಿವಾಸಿ ಸರಳ(25) ಎಂದು ಗುರುತಿಸಲಾಗಿದೆ. ಸರಳಾ ಪತಿ ವೀರಭದ್ರಾಚಾರಿ ಪತ್ನಿಯನ್ನು ಸದಾ ಶಂಕಿಸುತ್ತಿದ್ದ ಎನ್ನಲಾಗಿದೆ. ಹಗ್ಗದಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ ಅನುಮಾನ ಬಾರದಿರಲಿ ಎಂದು ನೇಣು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದ ಎಂದು ತಿಳಿದುಬಂದಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುವಾಗ ತಪ್ಪೊಪ್ಪಿಕೊಂಡಿದ್ದಾನೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: