ಮೈಸೂರು

ಇಬ್ಬರು ಸರಗಳ್ಳರ ಬಂಧನ

ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿದ ವಿಜಯನಗರ ಠಾಣಾ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಹೂಟಗಳ್ಳಿಯ ಮಂಜ ಅಲಿಯಾಸ್ ಕಳ್ ಮಂಜ (26), ಕುಂಬಾರಕೊಪ್ಪಲಿನ ಚಂದನ್ (24) ಎಂದು ಗುರುತಿಸಲಾಗಿದೆ. ಆರೋಪಿಗಳು ಫೆಬ್ರವರಿ 3ರಂದು ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರಿಂದ ಸರ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ. ಬಂಧಿತರಿಂದ 1,10,000 ರೂ.ಮೌಲ್ಯದ 40ಗ್ರಾಂ ಚಿನ್ನದ ಸರವನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ  ಮಹೇಂದ್ರ ರೋಡಿಯೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಮಂಜ ಈ ಹಿಂದೆ ಮೈಸೂರಿನ ವಿವಿಧೆಡೆಗಳಲ್ಲಿ ಸರಗಳ್ಳತನ ನಡೆಸಿದ್ದು, ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಪತ್ತೆ ಕಾರ್ಯಾಚರಣೆಯಲ್ಲಿ ವಿಜಯನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎ.ಗುರುಪ್ರಸಾದ್, ಎಎಸ್ಐ ಕೃಷ್ಣ, ಧನರಾಜ್, ಸಿಬ್ಬಂದಿಗಳಾದ ದಿವಾಕರ್, ಎಸ್.ಮಹದೇವ್, ವಸಂತಕುಮಾರ್, ಸೋಮಶೆಟ್ಟಿ, ಸುರೇಶ್, ಸಲೀಂಪಾಷಾ, ಸಾಗರ್ ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: