ಮನರಂಜನೆ

ಬಹು ನಿರೀಕ್ಷಿತ “ಚಕ್ರವರ್ತಿ” ಎಪ್ರಿಲ್ ನಲ್ಲಿ ತೆರೆಗೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಚಕ್ರವರ್ತಿ’ ಏಪ್ರಿಲ್ ತಿಂಗಳಿನಲ್ಲಿ ತೆರೆಕಾಣಲಿದೆ.

ಚಕ್ರವರ್ತಿ ಸಿನಿಮಾದ ಟ್ರೇಲರ್ ಈ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದ್ದು, ಚಿತ್ರತಂಡವು ದರ್ಶನ್ ಅಭಿಮಾನಿಗಳಿಗೆ ಯುಗಾದಿ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡುತ್ತಿದೆ.

ಈಗಾಗಲೇ ಚಕ್ರವರ್ತಿ ಸಿನಿಮಾದ 3 ಟೀಸರ್ ಗಳು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಸ್ಪಂದನೆ ದೊರಕಿದೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿವೆ. ಚಿಂತನ್ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಹಾಗೂ ದೀಪಾ ಸನ್ನಿಧಿ ನಟಿಸಿರುವ ಈ ಸಿನಿಮಾದಲ್ಲಿ ದಿನಕರ್ ತೂಗುದೀಪ, ಆದಿತ್ಯ, ಯಶಸ್ ಸೂರ್ಯ, ಬಂಗಾರಪ್ಪ ಮತ್ತಿತರರು ತಾರಾಗಣದಲ್ಲಿದ್ದಾರೆ. (ಎಲ್.ಜಿ-ಎಸ್.ಎಚ್)

 

 

Leave a Reply

comments

Related Articles

error: