ಮೈಸೂರು

ಆಡಳಿತ ತರಬೇತಿ ಸಂಸ್ಥೆಯ ನೂತನ ವೆಬ್‍ಸೈಟ್‍ಗೆ ಚಾಲನೆ

ಮೈಸೂರು,ಮಾ.10:- ಆಡಳಿತ ತರಬೇತಿ ಸಂಸ್ಥೆಯ ನೂತನ ಅಧಿಕೃತ ವೆಬ್‍ಸೈಟ್‍ಗೆ ಸಂಸ್ಥೆಯ ಮಹಾ ನಿರ್ದೇಶಕರಾದ ಕಪಿಲ್ ಮೋಹನ್ ಇವರು ಇಲ್ಲಿನ ಕಾವೇರಿ ಸಭಾಂಗಣದಲ್ಲಿಂದು ಚಾಲನೆ ನೀಡಿದರು. ವೆಬ್‍ಸೈಟ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆಡಳಿತ ತರಬೇತಿ ಸಂಸ್ಥೆಯಲ್ಲಿ ನಡೆಯುವ ಕರ್ನಾಟಕ ಕೇಡರ್‍ಗೆ ಆಯ್ಕೆಯಾದ ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಅನ್ಯ ಸೇವಾ ವೃಂದದ ಅಧಿಕಾರಿಗಳಿಗೆ ಸಾಮಾನ್ಯ ಬುನಾದಿ ತರಬೇತಿ, ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪುನರ್ ಮನನ ತರಬೇತಿಗಳ ವಿವರ, ಅಂಕಿ-ಅಂಶಗಳು, ಸಂಶೋಧನಾ ಚಟುವಟಿಕೆಗಳು, ಸಂಸ್ಥೆಯ ವಿವಿಧ ಕೇಂದ್ರಗಳು ಮತ್ತು ಜಿಲ್ಲಾ ತರಬೇತಿ ಸಂಸ್ಥೆಗಳ ಪ್ರಗತಿ ಕುರಿತು ನವೀಕೃತ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದರು.
ವೆಬ್‍ಸೈಟ್ ಬಳಕೆಯಿಂದ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಹುಮುಖ್ಯ ಸಾಧನವಾಗಿ ಕಾರ್ಯನಿರ್ವಹಿಸಬಹುದು ಎಂದು ಹೇಳಿದರು. ಆಡಳಿತ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಅಧಿಕಾರಿಗಳು ಮಾತ್ರವಲ್ಲದೆ, ಹೊಸದಾಗಿ ನೇಮಕಗೊಂಡ ಅಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೂಡ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸಮಾರಂಭದಲ್ಲಿ ವಿ.ಭಾಗ್ಯಲಕ್ಷ್ಮಿ, ಜಂಟಿ ನಿರ್ದೇಶಕರು (ತರಬೇತಿ) ಮತ್ತು ಯಶಸ್ವಿನಿ ಎಚ್.ಎಸ್. ಉಪ-ನಿರ್ದೇಶಕರು, ಸಂಸ್ಥೆಯ ಬೋಧಕರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: