ಕರ್ನಾಟಕಪ್ರಮುಖ ಸುದ್ದಿ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲ ಅಂದ್ರು ಜನಾರ್ದನ ಪೂಜಾರಿ !

ಮಂಗಳೂರು : ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವುದಿಲ್ಲ… ಹೀಗೆಂದವರು ವಿರೋಧ ಪಕ್ಷದವರಲ್ಲ. ಬದಲಾಗಿ ಕಾಂಗ್ರೆಸ್‍ ಪಕ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿ.

ಹೌದು, ತಮ್ಮ ಎಂದಿನ ಸಿದ್ದರಾಮಯ್ಯ ವಿರುದ್ಧದ ಸಿಟ್ಟು ಹೊರ ಹಾಕಿದ ಪೂಜಾರಿ “ಸಿಎಂ ಅವರಿಂದ ಪಕ್ಷಕ್ಕೆ ಸೋಲಾಗಲಿದೆ. ಎಸ್ಎಂ ಕೃಷ್ಣ ಬಿಜೆಪಿ ಸೇರಲು ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಕಾರಣದಿಂದಲೇ ಉಪಚುನಾವಣೆಯಲ್ಲಿ ಸೋಲು ಕಾಣಬೇಕಿದೆ. ನಮ್ಮ ಪಕ್ಷ ಸರಿ ಇದೆ. ಆದರೆ ಸಿದ್ದರಾಮಯ್ಯ ಸರಿಯಿಲ್ಲ” ಎಂದು ನೇರ ವಾಗ್ದಾಳಿ ನಡೆಸಿದರು.

ಇನ್ನೂ ಮುಂದುವರಿದು, “ಜಿ.ಪರಮೇಶ್ವರರನ್ನು ಸಿಎಂ ಮಾಡಿದರೆ ಎಲ್ಲವು ಸರಿಯಾಗಲಿದೆ. ಪರಮೇಶ್ವರ್ ಸಿಎಂ ಆದರೆ ಉಪಚುನಾವಣೆಯಲ್ಲೂ ಪಕ್ಷ ಗೆಲ್ಲಲಿದೆ” ಎಂದರು.

ದೇಶದಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಪರಿಸ್ಥಿತಿಗೆ ಮೋದಿ ಕಾರಣ. ಮೋದಿ ಮೋಡಿಗೆ ಕಾಂಗ್ರೆಸ್‍ಗೆ ಎಲ್ಲ ಕಡೆ ಸೋಲಾಗುತ್ತಿದೆ. ರಾಹುಲ್ ಗಾಂಧಿ ಪ್ರಧಾನಮಂತ್ರಿಯಾದರೆ ಮೋದಿಗಿಂತ ಉತ್ತಮ ಆಡಳಿತ ನೀಡಬಲ್ಲರು ಎಂದು ಹೇಳಿದರು.

(ಎಸ್‍.ಎನ್‍/ಎನ್‍.ಬಿಎನ್‍)

Leave a Reply

comments

Related Articles

error: