ಕರ್ನಾಟಕಪ್ರಮುಖ ಸುದ್ದಿ

ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ : ಗಾಯಗೊಂಡ ಬಸ್‍ ಚಾಲಕ

ಮಂಗಳೂರು : ಬಸ್ ಚಲಾಯಿಸುತ್ತಿದ್ದ ವೇಳೆ ಬಸ್ ಚಾಲಕನ ಜೇಬಿನಲ್ಲಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಘಟನೆ ಮಂಗಳೂರಿನ ಉಪ್ಪಿನಗಂಡಿಯಲ್ಲಿ ನಡೆದಿದೆ.

ಮಡಂತ್ಯಾರಿನಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಖಾಸಗಿ ಬಸ್‌ ಒಂದರಲ್ಲಿ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಬಸ್ ಚಾಲಕನ ಕಿಸೆಯಲ್ಲಿದ್ದ ಇಂಟೆಕ್ಸ್‌ ಕಂಪೆನಿಗೆ ಸೇರಿದ ಮೊಬೈಲ್‌ ಸ್ಫೋಟಗೊಂಡಿದೆ. ಇದರಿಂದ ಬಸ್ಸಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಚಾಲಕ ಧೃತಿಗೆಡದೆ ಬಸ್‍ ಅನ್ನು ನಿಯಂತ್ರಿಸಿದ್ದರಿಂದ ಸಂಭವಿಸಬಹುದಾದ ಭಾರೀ ಅಪಾಯವೊಂದು ತಪ್ಪಿದಂತಾಗಿದೆ. ಆದರೆ ಚಾಲಕ ಸಂದೇಶ್‌ ಬಂದಾರು ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

(ಎಸ್‍.ಎನ್‍/ಎನ್‍.ಬಿಎನ್‍)

Leave a Reply

comments

Related Articles

error: