ಮೈಸೂರು

ಮಾ.14 : ಕೌಸ್ತುಭ ಕನ್ನಡ ಮಾಸಪತ್ರಿಕೆ 11ನೇ ವರ್ಷದ ಶುಭ ಹಾರೈಕೆ ಸಮಾರಂಭ

ಮೈಸೂರು,ಮಾ.11:- ಕಳೆದ ಹತ್ತು ವರ್ಷಗಳಿಂದ ಚುಟುಕು ಸಾಹಿತಿಗಳ ಮುಖವಾಣಿಯಾಗಿ ಕೌಸ್ತುಭ ಕನ್ನಡ ಮಾಸಪತ್ರಿಕೆ 11ನೇ ವರ್ಷದ ಶುಭ ಹಾರೈಕೆ ಸಮಾರಂಭವನ್ನು ಮಾರ್ಚ್ 14ರಂದು ಶನಿವಾರ ಬೆಳಿಗ್ಗೆ 10.30ಕ್ಕೆ ಮೈಸೂರಿನ ಶಾರದಾ ವಿಲಾಸ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್ ಮಾಹಿತಿ ಣೀಡಿ ಸಿದ್ಧಗಂಗಾಮಠದ ಪೂಜ್ಯಶ್ರೀ ಸಿದ್ದಲಿಂಗಸ್ವಾಮೀಜಿಯವರ ದಿವ್ಯ ಸನ್ನಿಧಾನದಲ್ಲಿ ಇಡೀ ದಿನ ನಡೆಯುವ ಕಾರ್ಯಕ್ರಮದ ಸರ್ವಾಧ್ಯಕ್ಷರಾಗಿ ಚುಟುಕು ಯುಗಾಚಾರ್ಯ ಡಾ.ಎಂ.ಜಿ.ಆರ್ ಅರಸ್ ಅವರನ್ನು ಆಯ್ಕೆ ಮಾಡಲಾಗಿದೆ. ಪರಿಸರ ವಿಜ್ಞಾನಿಯಾಗಿದ್ದ ದಿ.ಡಾ.ಟಿ.ಪಿ.ಹಾಲಪ್ಪ ಗೌಡರ ಹೆಸರಿನಲ್ಲಿ ಪ್ರಾರಂಭಿಸಿರುವ ಪ್ರಶಸ್ತಿಯನ್ನು ಹಿರಿಯ ಇಂಜಿನಿಯರ್ ತುಮಕೂರಿನ ಶಿವಲಿಂಗಪ್ಪ ಅವರಿಗೆ, ಚುಟುಕು ಯುಗಾಚಾರ್ಯ ಡಾ.ಎಂ.ಜಿ.ಆರ್ ಅವರ ಹೆಸರಿನಲ್ಲಿ ಪ್ರಾರಂಭಿಸಿರುವ ಪ್ರಶಸ್ತಿಯನ್ನು ಅಂತರ್ ರಾಷ್ಟ್ರೀಯ ಖ್ಯಾತಿಯ ಆಯುರ್ವೇದ ವೈದ್ಯ ಡಾ.ಜಯಪ್ರಕಾಶ್ ನಾರಾಯಣ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ದಿವಂಗತ ಶಿವಕುಮಾರಸ್ವಾಮೀಜಿಯವರ ಸಿದ್ಧಿಸಾಧನೆಯ ಬಗ್ಗೆ ಕೌಸ್ತುಭ ಪ್ರಕಾಶನದ ವತಿಯಿಂದ ಪ್ರಕಟಿಸಿರುವ 101 ಚುಟುಕು ಸಾಹಿತಿಗಳ ಚುಟುಕುಗಳಿಂದ ಕೂಡಿರುವ ಶತಮಾನದ ಸಂತ ಕೃತಿಯನ್ನು ಲೋಕಾರ್ಪಣೆ ಮಾಡಲಾಗುವುದು. ಮಧ್ಯಾಹ್ನ ರಾಜ್ಯದ 30ಜಿಲ್ಲೆಗಳಿಂದ ಆಯ್ಕೆ ಮಾಡಿದ ಚುಟುಕು ಕವಿಗಳಿಮದ ಶತಮಾನದ ಸಂತ ಕೃತಿಯ ಲೇಖಕ ಚುಟುಕು ಸಾಹಿತಿಗಳಿಂದ ಚುಟುಕು ವಾಚನಗೋಷ್ಠಿಯನ್ನು ಏರ್ಪಡಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತೋಂಟದಾರ್ಯ, ಲೋಕೇಶಪ್ಪ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: