ಮೈಸೂರು

ಕೊರೋನಾ ಮುಂಜಾಗ್ರತಾ ಕ್ರಮ ಕುರಿತು ಎಲ್ಲಾ ಇಲಾಖೆ ಅಧಿಕಾರಿಗಳು ಕೂಡ ಅರಿವು ಮೂಡಿಸುವಂತೆ ಸಿಇಒ ಕೆ. ಜ್ಯೋತಿ ಸೂಚನೆ

ಮೈಸೂರು,ಮಾ.11:-  ಕೊರೋನಾ ಮುಂಜಾಗ್ರತೆ ಕುರಿತು ಜಿಲ್ಲಾಪಂಚಾಯತ್ ಕೆಡಿಪಿ ಸಭೆಯಲ್ಲಿಂದು  ಚರ್ಚೆ ನಡೆಸಲಾಯಿತು.

ಅಗತ್ಯವಿದ್ದಷ್ಟು ಮಾಸ್ಕ್ ಗಳು ಲಭ್ಯವಿಲ್ಲ.10 ಸಾವಿರ ಮಾಸ್ಕ್ ಲಭ್ಯವಿದೆ. 2 ಸಾವಿರ ಮಾಸ್ಕ್ ಗಳನ್ನು ಸಿಬ್ಬಂದಿಗೆ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಬಳಸಲು ಮೀಸಲಿಡಲಾಗಿದೆ. ಜನರಿಗೂ ಕೂಡ ಇದರ ಬಗ್ಗೆ ಅರಿವು ಮೂಡಿಸಲಾಗಿದೆ‌‌. ವಿಶೇಷ ವಾರ್ಡ್ ಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾಪಂಚಾಯತ್ ಸಿಇಒ ಕೆ. ಜ್ಯೋತಿ  ಮಾತನಾಡಿ ಎಲ್ಲಾ ಕಚೇರಿಗಳಿಗೂ ಕೊರೋನಾ ಮುಂಜಾಗ್ರತಾ ಕ್ರಮ ಕುರಿತು ತೆಗೆದುಕೊಳ್ಳಬಹುದಾದ ಕರ ಪತ್ರ ವಿತರಿಸಿ. ಸಾಕಷ್ಟು ಜನರೂ ಕೂಡ ಸರ್ಕಾರಿ ಕಚೇರಿಗೆ ಬರುತ್ತಾರೆ. ಎಲ್ಲಾ ಇಲಾಖೆ ಅಧಿಕಾರಿಗಳು ಕೂಡ ಅರಿವು ಮೂಡಿಸುವಂತೆ ಸೂಚನೆ ನೀಡಿದರು.

ಮೈಸೂರಿನಲ್ಲಿ ಈವರೆಗೂ ಕೊರೋನಾ ವೈರಸ್ ಪತ್ತೆ ಆಗಿಲ್ಲ. ಕೆಮ್ಮು ,ನೆಗಡಿ, ಜ್ವರ ಇರೋರು ಕೆ ಆರ್ ಆಸ್ಪತ್ರೆಯ ಐಸೂಲೇಶನ್ ಸೆಂಟರ್ ಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬಹುದು. ತೀರಾ ಅನುಮಾನ ಬಂದರೆ ಆ ವ್ಯಕ್ತಿಯನ್ನು  14 ದಿನ ನಿಗಾ ವಹಿಸಲಾಗುವುದು. ಸದ್ಯ ಹತ್ತು ಸಾವಿರ ಮಾಸ್ಕ್  ಲಭ್ಯವಿದೆ. ಕೆಲಸ ಮಾಡುತ್ತಿರುವ ನಮ್ಮ ಸಿಬ್ಬಂದಿಗೆ ಎರಡು ಸಾವಿರ ಮಾಸ್ಕ್ ನೀಡಲಾಗಿದೆ. ಆದ್ರೆ ಈ ತ್ರಿಬಲ್  ಲೇಯರ್  ಮಾಸ್ಕ್ ಗೆ ಕೊರೋನಾ ವೈರಸ್  ತಡೆಯುವ ಶಕ್ತಿ ಇಲ್ಲ. ಎನ್. 95 ಮಾಸ್ಕ್ ಬೇಕು ಅದರ ಮಾರ್ಕೆಟ್ ಬೆಲೆ 90 ರೂಪಾಯಿ. ಆದರೆ ಮೆಡಿಕಲ್ ಗಳಲ್ಲಿ ಒಂದು ಮಾಸ್ಗೆ 500 ರೂ.ಗೆ ಮಾರಾಟ ಮಾಡ್ತಿದ್ದಾರೆ ಎಂದು ಡಿ ಹೆಚ್  ಒ  ವೆಂಕಟೇಶ್ ಸ್ಪಷ್ಟನೆ ನೀಡಿದರು. ಕೇರಳದಿಂದ ರಾಜ್ಯಕ್ಕೆ ಬರುವ ಎಲ್ಲಾ ವಾಹನಗಳು ಹಾಗೂ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೆಚ್ ಡಿ ಕೋಟೆಯ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಲಾಗ್ತಿದೆ. ಜಿಲ್ಲಾ ಪಂಚಾಯ್ತಿಯಲ್ಲಿಯೂ ಕೊರೋನಾ ಕುರಿತು ಚರ್ಚೆ ನಡೆಸಲಾಗಿದೆ. ಹಕ್ಕಿ ಜ್ವರದ ಬಗ್ಗೆಯೂ ಚರ್ಚೆ ನಡೆದಿದೆ. ಹೆಬ್ಬಾಳು ಕೆರೆ ಬಳಿ ಹಕ್ಕಿಗಳು ಸಾವನ್ನಪ್ಪಿವೆ. ಈ ಹಕ್ಕಿಗಳು ಬೇರೆ ಭಾಗದಿಂದ ವಲಸೆ ಬಂದಿವೆ. ಹಕ್ಕಿಗಳ ಸಾವಿಗೆ ಕಾರಣ ತಿಳಿಯಲು ಬೆಂಗಳೂರಿಗೆ ಸ್ಯಾಂಪಲ್ ಕಳುಹಿಸಲಾಗಿದೆ. ಹಕ್ಕಿ ಜ್ವರಕ್ಕೆ  ಚಿಕಿತ್ಸೆ ಲಭ್ಯವಿದೆ ಯಾರೂ ಭಯಪಡುವ ಅಗತ್ಯ ಇಲ್ಲ ಎಂದರು.

ಸಭೆ ಜಿ.ಪಂ.ಅಧ್ಯಕ್ಷೆ ಪರಿಮಳ ಶ್ಯಾಂ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಿ.ಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: