
ಮೈಸೂರು
ಬಾಟಲಿ ನೀರು ಕುಡಿದು ಶಾಲಾ ಬಾಲಕ ಅಸ್ವಸ್ಥ
ಮೈಸೂರು,ಮಾ.11:- ಬಾಟಲಿ ನೀರು ಕುಡಿದು ಶಾಲಾ ಬಾಲಕ ಅಸ್ವಸ್ಥಗೊಂಡ ಘಟನೆ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನಲ್ಲಿ ನಡೆದಿದೆ.
ಬಾಟಲ್ ನೀರು ಕುಡಿದು ವಾಂತಿ ಮಾಡಿಕೊಡಿರುವ ಬಾಲಕನನ್ನು ಟಿ. ನರಸಿಪುರದ ಸಾರ್ವಜಿನಿಕ ಆಸ್ಪತ್ರೆಗೆ ಪೋಷಕರು ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದು, ಟಿ. ನರಸೀಪುರ ತಾಲೂಕಿನ ಹುಣಸೂರು ಗ್ರಾಮದ ಕುಮಾರ್ ಅವರ ಪುತ್ರ ಪ್ರಣವ್ ಎಂಬ 5ವರ್ಷದ ಬಾಲಕನೇ ಅಸ್ವಸ್ಥನಾದವನಾಗಿದ್ದಾನೆ. ಪಟ್ಟಣದ ಕುರುಬರ ಬೀದಿಯ ಪ್ಲೋರಿಯಾನಾ ಶಾಲೆಯ ಎಲ್ ಕೆಜಿ ವ್ಯಾಸಂಗ ಮಾಡುತ್ತಿರುವ ಪ್ರಣವ್ ಮಧ್ಯಾಹ್ನದ ಊಟದ ಸಮಯದಲ್ಲಿ ಕ್ರಿಸ್ಟಲ್ ಕಂಪನಿಯ ಬಾಟಲ್ ನೀರು ಕುಡಿದು ಅಸ್ವಸ್ಥನಾಗಿದ್ದಾನೆ. ಮಗು ಕುಡಿದಿರುವ ಕ್ರಿಸ್ಟಲ್ ಕಂಪನಿಯ ನೀರಿನಲ್ಲಿ ಆಸಿಡ್ ಮಿಶ್ರಿತವಾಗಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಕ್ರಿಸ್ಟಲ್ ಕಂಪನಿಯ ನೀರಿನ ಬಾಟಲಿಯನ್ನು ಖರೀದಿ ಮಾಡಿ ಮಗನಿಗೆ ಶಾಲೆಗೆ ತೆಗೆದು ಕೊಂಡು ಹೋಗಲು ಪೋಷಕರು ನೀಡಿದ್ದರು. ಪಟ್ಟಣದ ಆಲಗೂಡು ರಸ್ತೆಯಲ್ಲಿ ಸ್ಥಳೀಯರು ಶುದ್ಧೀಕರಿಸಿ ಕ್ರಿಸ್ಟಲ್ ಹೆಸರಿನ ಶುದ್ಧ ಕುಡಿಯುವ ನೀರಿನ ಕಂಪನಿಯ ನೀರನ್ನು ಮಾರಾಟ ಮಾಡುತ್ತಿದ್ದರು. (ಕೆ.ಎಸ್,ಎಸ್.ಎಚ್)