ಮೈಸೂರು

ಹೆಚ್ಚಿನ ಸಂಖ್ಯೆಯಲ್ಲಿ ಹಕ್ಕಿಗಳು, ಕೋಳಿಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ನಾಗೇಂದ್ರ

ಮೈಸೂರು,ಮಾ.12 :- ನಗರದಲ್ಲಿ ಕೊಕ್ಕರೆಗಳು ಹಾಗೂ ಕೋಳಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ ಇಂದು ಬೆಳಿಗ್ಗೆ ಕುಕ್ಕರಹಳ್ಳಿ ಕೆರೆ, ಹೆಬ್ಬಾಳು ಕೆರೆ ಸೇರಿದಂತೆ ಇನ್ನಿತರ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ ನಗರದ ಕುಕ್ಕರಹಳ್ಳಿ ಹಾಗೂ ಹೆಬ್ಬಾಳು ಕೆರೆಗಳ ಸುತ್ತಮುತ್ತ ಕಳೆದ ಮೂರ್ನಾಲ್ಕು ದಿನಗಳಿಂದ 60ಕ್ಕೂ ಹೆಚ್ಚು ಕೊಕ್ಕರೆಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವುದು ಬಹುಶಃ ಹಕ್ಕಿಜ್ವರ ದಿಂದ ಇರಬಹುದೆಂಬ ಅನುಮಾನವಿದೆ. ಕೆಲವು ಪಕ್ಷಿಗಳು ವಾಸಿಸುತ್ತಿದ್ದ ಮರಗಳಲ್ಲೇ ಸಾವನ್ನಪ್ಪುತ್ತಿದ್ದರೆ ಮುಂದಿನ ದಿನಗಳಲ್ಲಿ ಈ ಕೆರೆಗಳಲ್ಲಿ ಪಕ್ಷಿಗಳೇ ಇಲ್ಲದಂತಾಗುತ್ತವೆ ಎಂದರು.

ನಗರದಲ್ಲಿ ಮೃತ ಪಟ್ಟಿರುವ ಪಕ್ಷಿಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆ ಮಾಡಿದ್ದು ಪ್ರಾಥಮಿಕ ವರದಿಯಲ್ಲಿ ಹಕ್ಕಿಗಳ ಸಾವಿಗೆ ಖಚಿತ ಕಾರಣ ಏನು  ಎಂಬುದನ್ನು ಪತ್ತೆಹಚ್ಚಲು ಅವುಗಳ ಕೆಲವು ಅಂಗಾಂಗಳನ್ನು ಬೆಂಗಳೂರಿನ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.

ಇಂದು ಬೆಳಿಗ್ಗೆ ಕೈಗೊಂಡ ಕೆರೆಗಳ ಪರಿಶೀಲನೆ ಸಂದರ್ಭದಲ್ಲಿ ಶಾಸಕ ನಾಗೇಂದ್ರ ಮಾಸ್ಕ್ ಧರಿಸಿದ್ದರು. ಶಾಸಕರೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪಶುಪಾಲನಾ ಇಲಾಖೆ, ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: