
ಮೈಸೂರು
ಲಯನ್ಸ್ ಸಮೂಹ ಸಂಸ್ಥೆಯಿಂದ ಮೆಗಾ ಆರೋಗ್ಯ ಕ್ಯಾಂಪ್
ಮೈಸೂರು, ಮಾ.12:- ನಗರದ ಲಯನ್ಸ್ ಅಂತರರಾಷ್ಟ್ರೀಯ ಸಮೂಹ ಸಂಸ್ಥೆಗಳ ಜಿಲ್ಲೆ 317/ಎ ಇದರ ರಾಜ್ಯಪಾಲರಾದ ಡಾ.ಲಯನ್ ನಾಗರಾಜ್ ವಿ.ಬೈರಿ (ಪಿ.ಎಂ.ಜೆ.ಎಫ್)ಅವರ 50ನೇ ಹುಟ್ಟುಹಬ್ಬದ ಪ್ರಯುಕ್ತ ಬೀರಿಹುಂಡಿ ಗ್ರಾಮಪಂಚಾಯತ್ ಮುಂಭಾಗ ಲಯನ್ಸ್ ಕ್ಲಬ್ ಆಫ್ ಸಿರಿ, ಸ್ಪಂದನ, ಲಿಯೋ, ವಿ.ವಿ.ಎಸ್.ಟ್ರಸ್ಟ್ ಹಾಗೂ ನಾರಾಯಣ ಹೃದಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಉಚಿತವಾಗಿ ಹೃದ್ರೋಗ ತಪಾಸಣೆ ಹಾಗೂ ಭಗವಾನ್ ಮಹಾವೀರ್ ದರ್ಶನ್ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಮತ್ತು ಶಸ್ತ್ರಚಿಕಿತ್ಸೆ ಹಾಗೂ ಜೆ.ಎಸ್.ಎಸ್. ಆಯುರ್ವೇದಿಕೆ ಮಹಾವಿದ್ಯಾಲಯ ಇವರ ವತಿಯಿಂದ ಸಾಮಾನ್ಯ ಆಯುರ್ವೇದಿಕೆ ತಪಾಸಣೆ ಹಾಗೂ ಪ್ರಲಕ್ಷ ಆಸ್ಪತ್ರೆ ವತಿಯಿಂದ ಕೀಲು ಮತ್ತು ಮೊಳೆ ತಪಾಸಣೆಯ ಮೆಗಾ ಆರೋಗ್ಯ ಕ್ಯಾಂಪ್ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೀರಿಹುಂಡಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವಣ್ಣ ನೆರವೇರಿಸಿದರು. ಜಿ.ಪಂ. ಅಧ್ಯಕ್ಷ ಬಸವೇಗೌಡ, ಲಯನ್ಸ್ ಅಂತರರಾಷ್ಟ್ರೀಯ ಸಂಘ ಸಂಸ್ಥೆಗಳ ಜಿಲ್ಲಾ ಸಂಪುಟ ಕಾರ್ಯದರ್ಶಿ ಜಯರಾಮು, ಮಲ್ಲಪ್ಪಗೌಡ, ಕ್ಲಬ್ ಆಫ್ ಸಿರಿ ಹಾಗೂ ಸ್ಪಂದನ ಅಧ್ಯಕ್ಷ ಸಿರಿ ಬಾಲು, ಕಾರ್ಯದರ್ಶಿ ಶಿವಶಂಕರ್, ಪುಟ್ಟರಾಜು, ಶೋಭಾ ಸಿರಿ ಬಾಲು, ಶಂಕರ್ರಾಜು, ಶ್ರೀಧರ್ ಹಾಗೂ ಇನ್ನಿತರ ನಿರ್ದೇಶಕರು, ವಿ.ವಿ.ಎಸ್.ಟಿ.ಯ ಎಲ್ಲ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಳಿಕ ಹಸಿವು ನಿರ್ಮೂಲನೆ ಪ್ರಯುಕ್ತ 100 ಮಂದಿಗೆ ಅನ್ನ ಸಂತರ್ಪಣೆಯನ್ನು ನಡೆಸಲಾಯಿತು. (ಜಿ.ಕೆ,ಎಸ್.ಎಚ್)