ಪ್ರಮುಖ ಸುದ್ದಿ

ತಂದೆಯ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ಬಾಲಕಿ ಮೇಲೆ ಬಿದ್ದ ಮರದ ಕೊಂಬೆ : ಗಂಭೀರ ಗಾಯ

ರಾಜ್ಯ(ಬೆಂಗಳೂರು)ಮಾ.12:- ತಂದೆಯ ಜತೆ ಬೈಕ್ ನಲ್ಲಿ  ಶಾಲೆಗೆ ತೆರಳುತ್ತಿದ್ದ ಬಾಲಕಿಯ ಮೇಲೆ ಮರದ ಕೊಂಬೆ ಬಿದ್ದು ಬಾಲಕಿ ತಲೆಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ರಾಮಮೂರ್ತಿ ನಗರದ ಕೌದೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತ್ರಿಷಾ ಮರದ ಕೊಂಬೆ ಬಿದ್ದು ಗಾಯಗೊಂಡ ಬಾಲಕಿ. ತ್ರಿಷಾ ತಂದೆಯ ಜತೆ ಬೈಕ್ ನಲ್ಲಿ ಶಾಲೆಗೆ ತೆರಳುತ್ತಿದ್ದ ವೇಳೆ ಒಣ ಮರದ ಕೊಂಬೆ ಆಕೆಯ ಮೇಲೆ ಬಿದ್ದು ಈ ಘಟನೆ ಸಂಭವಿಸಿದೆ.

ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಆರ್ ಎಫ್ ಓ ತಾರನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: