ಮೈಸೂರು

ಟಾಟಾ ಸುಮೋ- ಕಾರು ಮುಖಾಮುಖಿ: ಪವಾಡ ಸದೃಶ ಪಾರಾದ ಎಸ್ಪಿ

ತಿ.ನರಸೀಪುರ ತಾಲೂಕಿನಲ್ಲಿ ಟಾಟಾ ಸುಮೋ ಮತ್ತು  ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿದ್ದ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಗರ್ಗೇಶ್ವರಿ ಬಳಿ ನಡೆದ ಅಪಘಾತದಲ್ಲಿ ಎಸ್ಪಿ ಕುಲದೀಪ್ ಕುಮಾರ್ ಜೈನ್ ಪವಾಡ ಸದೃಶ  ಅಪಾಯದಿಂದ ಪಾರಾಗಿದ್ದು,  ಎಸ್ಪಿಯವರ ವಾಹನ ಚಾಲಕನಿಗೆ ಗಾಯವಾಗಿದೆ.ಅವರನ್ನು ಆಸ್ಪತ್ರೆಗೆ ದಾಖಲು  ಮಾಡಲಾಗಿದೆ. ಟಾಟಾ ಸುಮೋದಲ್ಲಿದ್ದ ಆರು ಮಂದಿ‌ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅನಾಹುತವೇನೂ ಸಂಭವಿಸಿಲ್ಲ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: