ಮೈಸೂರು

ಮತ್ತೆ ಒಂದಾದ ತನ್ವೀರ್ ಸೇಠ್ ಮತ್ತು ರಿಜ್ವಾನ್ ಅರ್ಷದ್

ಸಚಿವ ತನ್ವೀರ್ ಸೇಠ್ ಮತ್ತು ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್  ಹಳೆ ಮುನಿಸು ಮರೆತು ರಾಜಿಯಾಗಿದ್ದು, ಮತ್ತೆ ಒಂದಾಗಿದ್ದಾರೆ.

ಮಂಗಳವಾರ ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ವಿಧಾನಪರಿಷತ್ ಸದಸ್ಯ ರಿಜ್ವಾನ್ ಹರ್ಷದ್ ಹಾಜರಾಗಿದ್ದರು. ಶಾಸಕರು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದು ಹಾಜರಾಗಿ ಹೇಳಿಕೆ ದಾಖಲಿಸಿದ್ದರು.

ಶಿಕ್ಷಣ ಸಚಿವ ತನ್ವೀರ್ ಸೇಠ್ ಸೇರಿದಂತೆ ಏಳು ಮಂದಿಯ  ವಿರುದ್ಧ 307 ಕೇಸ್ ದಾಖಲಾಗಿತ್ತು. 2008 ರಲ್ಲಿ ಮೈಸೂರಿನ ನರಸಿಂಹರಾಜ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ತನ್ವೀರ್ ಸೇಠ್, ರಿಜ್ವಾನ್ ಬಣದ ನಡುವೆ ಗಲಾಟೆ ನಡೆದಿತ್ತು.

ವಿಚಾರಣೆ ಬಳಿಕ ರಿಜ್ವಾನ್ ಮಾತನಾಡಿ ಇಬ್ಬರೂ ಒಂದೇ ಪಕ್ಷದಲ್ಲಿ ಇದ್ದೇವೆ, ವೈಮನಸ್ಯ ಬೇಡವೆಂದು ರಾಜಿಯಾಗಿದ್ದೇವೆ, ಎನ್.ಆರ್. ಕ್ಷೇತ್ರಕ್ಕೆ ಸದ್ಯ ನಾನು ಆಕಾಂಕ್ಷಿಯಲ್ಲ.ಬೆಂಗಳೂರು ನಗರದ ಜನರ ಸೇವೆ ಮಾಡಬೇಕೆಂದು ಬಯಸಿದ್ದೇನೆ, ಮುಂದೆ ಲೋಕಸಭಾ ಚುನಾವಣೆಯತ್ತ ಗಮನ ಕೊಡುತ್ತೇನೆ ಎಂದಿದ್ದಾರೆ.

ಆರನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ವಿಜಯ್ ಕುಮಾರ್ ಪವ್ಲೆ ಮುಂದೆ ಹೇಳಿಕೆಯನ್ನು ನೀಡಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: