ಮೈಸೂರು

ಚೆಸ್ಕಾಂ ಸಹಾಯಕ ಇಂಜಿನಿಯರ್ ಎಸಿಬಿ ಬಲೆಗೆ

ಹೆಚ್ಚುವರಿ ವಿದ್ಯುತ್ ಹಣಕ್ಕಾಗಿ 30ಸಾವಿರ ರೂ.ಲಂಚ  ಪಡೆಯುತ್ತಿದ್ದ ವೇಳೆ  ಚೆಸ್ಕಾಂ ನ ಸಹಾಯಕ  ಇಂಜಿನಿಯರ್ ಓರ್ವರನ್ನು  ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ನಗರ ಖಾಸಗಿ ವಿದ್ಯುತ್ ಗುತ್ತಿಗೆದಾರರೊಬ್ಬರು ತಾವು ಗುತ್ತಿಗೆ ಪಡೆದಿರುವ ಕಾರ್ಖಾನೆಗೆ 15ಹೆಚ್.ಪಿ ವಿದ್ಯುತ್ ನ್ನು 45 ಹೆಚ್.ಪಿ ವಿದ್ಯುತ್ ಗೆ ಉನ್ನತೀಕರಣಕ್ಕಾಗಿ ಹೂಟಗಳ್ಳಿ  ಸೆಕ್ಷನ್, ಚೆಸ್ಕಾಂಗೆ ಅರ್ಜಿ ಸಲ್ಲಿಸಿದ್ದರು.

ಆದರೆ ಹೂಟಗಳ್ಳಿ ಸೆಕ್ಷನ್ ಉಪವಿಭಾಗದ ಸಹಾಯಕ ಇಂಜಿನಿಯರ್ ಕೆ.ಎಸ್.ವೆಂಕಟೇಶ್ ಅವರು ವಿದ್ಯುತ್ ಉನ್ನತಿಕರಣಕ್ಕಾಗಿ 30ಸಾವಿರ ರೂ. ಲಂಚದ ಹಣವನ್ನು ನೀಡುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದರು. ಅರ್ಜಿದಾರರು 28ಸಾವಿರ ರೂ.ನೀಡಲು ಒಪ್ಪಿಕೊಂಡಿದ್ದರು. ಬಳಿಕ ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರನ್ನು ಸಲ್ಲಿಸಿದ್ದರು. ದೂರುದಾರರು ನೀಡಿದ ದೂರಿನನ್ವಯ ದೂರುದಾರರಿಂದ 28ಸಾವಿರ ರೂ. ಹಣವನ್ನು ಪಡೆಯುವಾಗ ಭ್ರಷ್ಟಾಚಾರ ನಿಗ್ರಹದಳದ ಎಸ್ಪಿ ಕವಿತಾ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸಹಾಯಕ ಇಂಜಿನಿಯರ್ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸಿಬಿ ತಂಡದ ಗಜೇಂದ್ರ ಪ್ರಸಾದ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: