ಮೈಸೂರು

ಹಳೆ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ಕಾಮದಾಟ ವಿಚಾರ : ನನ್ನ ಮಗಳನ್ನು ಹುಡುಕಿ ಕೊಡಿ ಎಂದು ಪೊಲೀಸರಿಗೆ ದೂರಿತ್ತ ಯುವತಿಯ ತಾಯಿ

ಮೈಸೂರು,ಮಾ.14:- ಹಳೆ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕನ ಕಾಮದಾಟ ವಿಚಾರಕ್ಕೆ ಸಂಬಂಧಿಸಿದಂತೆ ಕೊನೆಗೂ ಪೊಲೀಸರಿಗೆ ಯುವತಿ ತಾಯಿ ಕಾವೇರಮ್ಮ ದೂರು ನೀಡಿದ್ದಾರೆ.

ನಂಜನಗೂಡು ಡಿವೈಎಸ್ಪಿ ಗೆ ನೊಂದ ಮಹಿಳೆ ದೂರು ನೀಡಿದ್ದು, ನನ್ನ ಮಗಳನ್ನು ಹುಡುಕಿ ಕೊಡಿ ಎಂದು ಪೋಲಿಸರಿಗೆ ಯುವತಿಯ ತಾಯಿ ಮನವಿ ಮಾಡಿದ್ದಾರೆ. ಸಿದ್ದರಾಜು ಕುಟುಂಬಸ್ಥರಿಂದ ನನಗೆ ಜೀವ ಬೆದರಿಕೆ ಕೂಡ ಇದೆ. ಹೀಗಾಗಿ ನನಗೆ ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕು. ನನ್ನ ಮಗಳ ವಿಚಾರವಾಗಿ ದೂರು ನೀಡಲು ವಿಳಂಬವಾಗಿರುವುದಕ್ಕೆ ಸಿದ್ದರಾಜು ಕುಟುಂಬಸ್ಥರೇ ಕಾರಣ ಎಂದು ಅವರು ದೂರಿದ್ದಾರೆ. ಅವರು ಮಗಳನ್ನು ಕರೆತರುತ್ತೇವೆ ನೀನು ದೂರು ನೀಡಬೇಡ ಅಂದಿದ್ದರು. ಹೀಗಾಗಿ ನಾನು ದೂರು ನೀಡಲು ಹಿಂದೇಟು ಹಾಕಿದ್ದೆ. ಶಿಕ್ಷಕ ಸಿದ್ದರಾಜು‌ ಇದೀಗ ಕೆಲಸದಿಂದ ಅಮಾನತು ಆಗಿದ್ದಾನೆ. ಇದು ನನಗೆ ಮುಖ್ಯ ಅಲ್ಲ, ನನಗೆ ನನ್ನ ಮಗಳು ಬೇಕು ಎಂದು ದೂರು ನೀಡಿದ್ದಾರೆ. ಸಿದ್ದರಾಜು ನಂಜನಗೂಡು ತಾಲೂಕಿನ ರಾಂಪುರ ಗ್ರಾಮದ ಶಿಕ್ಷಕರಾಗಿದ್ದು, ಸಿದ್ದರಾಜು  ಯುವತಿಯೊಂದಿಗಿದ್ದ ಖಾಸಗಿ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: