ಮೈಸೂರು

ಕೊರೋನಾ ವೈರಸ್ ಎಫೆಕ್ಟ್‌ : ಪ್ರವಾಸಿಗರಿಲ್ಲದೇ ಜೀವನ ಸಾಗಿಸಲು ಕಷ್ಟವಾಗಿದೆ ಎಂದ ಟಾಂಗಾವಾಲಾಗಳು

ಮೈಸೂರು,ಮಾ.14:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲೀಗ ಪ್ರವಾಸಿಗರಿಲ್ಲದೇ ಟಾಂಗಾ ಗಾಡಿ ಮಾಲೀಕರ  ಬದುಕಿನ ಜಟಕಾಬಂಡಿ ಸಾಗುತ್ತಿಲ್ಲವಾಗಿದೆ.

ಕೊರೋನಾ ವೈರಸ್ ಎಫೆಕ್ಟ್‌ನಿಂದಾಗಿ ವ್ಯಾಪಾರವಿಲ್ಲದೆ ಟಾಂಗಾ ಗಾಡಿಗಳು ಖಾಲಿ ಖಾಲಿಯಾಗಿದ್ದು, ಕೊರೋನಾ ವೈರಸ್  ಎಫೆಕ್ಟ್‌ನಿಂದಾಗಿ ಪ್ರವಾಸಿಗರಿಲ್ಲದೆ ಟಾಂಗಾ ಗಾಡಿ ಮಾಲೀಕರು ನಷ್ಟಕ್ಕೀಡಾಗಿದ್ದಾರೆ. ಟಾಂಗಾವಾಲಗಳು ಪ್ರವಾಸಿಗರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ.  ಆದರೆ ಈ ಬಾರಿ ವಿಶ್ವದಾದ್ಯಂತ ಕೊರೋನಾ ವೈರಸ್ ಎಂಬ ಮಹಾಮಾರಿ ಇದುವರೆಗೆ 5ಸಾವಿರ ಮಂದಿಯನ್ನು ಬಲಿಪಡೆದುಕೊಂಡಿದ್ದು, ಹಂತಹಂತವಾಗಿ ಒಂದೊಂದು ದೇಶದತ್ತ ಮುಖಮಾಡಿದೆ.  ಜನತೆ ಈ ಭೀಕರ ವೈರಸ್ ನಿಂದ ಕಂಗೆಟ್ಟಿದ್ದಾರೆ. ಮನೆಯಿಂದ ಹೊರಬರೋದಕ್ಕೂ ಹೆದರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೂರದ ಊರುಗಳಿಗೆ ಪ್ರವಾಸಕ್ಕೆ ಬರೋದಂತೂ ದೂರದ ಮಾತು.  ಸರ್ಕಾರ ಕೂಡ ಒಂದು ವಾರಗಳ ಕಾಲ ಮಾಲ್, ಚಲನಚಿತ್ರಮಂದಿರ, ಶೂಟಿಂಗ್ ಎಲ್ಲವನ್ನೂ ಬಂದ್ ಮಾಡುವಂತೆ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಜನತೆ ಮನೆಯಿಂದ ಹೊರಗೆ ಬರೋದು ಕಷ್ಟವೇ.   ಇಂತಹ ಸ್ಥಿತಿಯಲ್ಲಿ  ಟಾಂಗಾ ಗಾಡಿಯ ಕುದುರೆ ಸಾಕೋದಕ್ಕೂ ಕಷ್ಟವಾಗುತ್ತಿದೆ ಎಂದಿರುವ ಟಾಂಗಾವಾಲಾಗಳು ಬೆಳಗ್ಗೆಯಿಂದ ಸಂಜೆವರೆಗೆ ನಿಂತರೂ ಒಂದು ರೂಪಾಯಿ ವ್ಯಾಪಾರವಿಲ್ಲ ಅಂತ ಬೇಸರವಾಗುತ್ತಿದೆ. ನಿತ್ಯ ಕುದುರೆಯೊಂದಕ್ಕೆ 300ರೂ.ಖರ್ಚು ಮಾಡಬೇಕು. ಕುದುರೆಗೆ ಖರ್ಚು ಮಾಡಲಿಕ್ಕೂ ಹಣ ದುಡಿಯೋಕಾಗುತ್ತಿಲ್ಲ. ಯಾವೊಬ್ಬ ಪ್ರವಾಸಿಗನೂ ಟಾಂಗಾ ಗಾಡಿ ಏರುವ ಯೋಚನೆಯನ್ನೇ ಮಾಡುತ್ತಿಲ್ಲ ಎಂದು ಟಾಂಗಾವಾಲ ಸಾದಿಕ್ ಪಾಷಾ ಹೇಳಿದರು. ಒಟ್ಟಿನಲ್ಲಿ ಕೊರೋನಾ ವೈರಸ್ ಎಫೆಕ್ಟ್ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: