ಮೈಸೂರು

ಸ್ವಿಫ್ಟ್ ಕಾರಿನ ಮೇಲೆ ಮುರಿದು ಬಿದ್ದ ಮರದ ಕೊಂಬೆ : ಕಾರು ಜಖಂ

ಮೈಸೂರಿನ ಮುಡಾ ಕಚೇರಿ ಎದುರು ನಿಲ್ಲಿಸಿಡಲಾಗಿದ್ದ ಸ್ವಿಫ್ಟ್ ಡಿಸೈರ್ ಕಾರಿನ ಮೇಲೆ ಬೃಹತ್ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು ಕಾರು ಜಖಂಗೊಂಡಿದೆ.

ಮುಡಾ ಕಚೇರಿ ಎದುರು ಯಾರೋ ಸ್ವಿಫ್ಟ್ ಕಾರನ್ನು ನಿಲ್ಲಿಸಿಟ್ಟು ತೆರಳಿದ ವೇಳೆ ಗಾಳಿಗೆ ಮರದ ಕೊಂಬೆ ತುಂಡರಿಸಿ ಬಿದ್ದಿದೆ. ತಕ್ಷಣ ಸರಸ್ವತಿಪುರಂ ಅಗ್ನಿಶಾಮಕ ಠಾಣೆಗೆ ಮಾಹಿತಿ ರವಾನಿಸಲಾಗಿ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮರದ ಟೊಂಗೆಯನ್ನು ತೆರವುಗೊಳಿಸುವ ಕಾರ್ಯ ನಡೆಸಿದರು.

ಕಾರು ಮೈಸೂರು ನಿವಾಸಿ ಕುಮಾರ್ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಕಾರನ್ನು ಸಿಬ್ಬಂದಿಗಳು ಲಕ್ಷ್ಮಿಪುರಂ ಠಾಣೆಗೆ ಕೊಂಡೊಯ್ದಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: