ಪ್ರಮುಖ ಸುದ್ದಿವಿದೇಶ

ಕೊರೊನಾ ವೈರಸ್ ಗೆ ಇಟಲಿಯಲ್ಲಿ ಒಂದೇ ದಿನ 250 ಮಂದಿ ಬಲಿ

ಇಟಲಿ,ಮಾ.14-ಕೊರೊನಾ ವೈರಸ್ ನಿಂದಾಗಿ ಇಟಲಿಯಲ್ಲಿ ನಿನ್ನೆ ಒಂದೇ ದಿನ 250 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಸೋಂಕಿತರ ಸಂಖ್ಯೆ 17% ರಷ್ಟು ಏರಿಕೆಯಾಗಿದ್ದು, 15,113 ಇದ್ದ ಸೋಂಕಿತರ ಸಂಖ್ಯೆ 17,660ಕ್ಕೆ ಏರಿದೆ.

ಇಲ್ಲಿಯವರೆಗೆ ಇಟಲಿಯಲ್ಲಿ 1266 ಮಂದಿ ಮೃತಪಟ್ಟಿದ್ದಾರೆ. 1328 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಚೀನಾ ಬಿಟ್ಟರೆ ಕೊರೊನಾ ವೈರಸ್ ನಿಂದ ಹೆಚ್ಚು ತತ್ತರಿಸಿರುವ ದೇಶ ಇಟಲಿಯಾಗಿದೆ.

ಕೊರೊನಾ ವೈರಸ್ ಕೇಂದ್ರ ಸ್ಥಾನ ಇದೀಗ ಯೂರೋಪ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದ ಚೀನಾ ದೇಶಕ್ಕೆ ಹೋಲಿಸಿದರೆ, ಪ್ರತಿ ದಿನ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚು ದಾಖಲಾಗುತ್ತಿರುವುದು ಯೂರೋಪ್ ನಲ್ಲಿ. (ಎಂ.ಎನ್)

Leave a Reply

comments

Related Articles

error: