ಮೈಸೂರು

ಶ್ರೀ ಕಾಳಿಕಾದೇವಿಯ ಗುಡ್ಡ ದೇವಸ್ಥಾನದ ಬಾಗಿಲಿನ ಬೀಗ ಮೀಟಿ ನಗ-ನಗದು ದೋಚಿದ ಕಳ್ಳರು

ಮೈಸೂರು,ಮಾ.14:-  ಗಾಂಧಿನಗರ ಫೋರಂ ಮಾಲ್ ಪಕ್ಕದಲ್ಲಿ ಅಬ್ಬಾ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿಯ ಗುಡ್ಡ ದೇವಸ್ಥಾನದ ಬಾಗಿಲಿನ ಬೀಗ ಮೀಟಿ  ಒಳನುಗ್ಗಿದ ಕಳ್ಳರು ಗೋಲಕದ ಬಾಗಿಲು ಮುರಿದು, ಗರ್ಭಗುಡಿಯ ಬಾಗಿಲ ಬೀಗ ಮುರಿದು ನಗ-ನಗದು ದೋಚಿದ ಘಟನೆ ನಡೆದಿದೆ.

ಈ ಕುರಿತು ನಟರಾಜು ಎಂಬವರು ನಜರ್ ಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗಾಂಧಿನಗರ ಫೋರಂ ಮಾಲ್ ಪಕ್ಕದಲ್ಲಿ ಅಬ್ಬಾ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿಯ ಗುಡ್ಡ ದೇವಸ್ಥಾನದ ಕಾರ್ಯದರ್ಶಿಯಾಗಿದ್ದು,   11/03/2020 ರಂದು ರಾತ್ರಿ ದೇವಸ್ಥಾನದಲ್ಲಿ ಎಂದಿನಂತೆ ಪೂಜೆ ನಡೆಯುವಾಗ ನಾನು ಪೂಜೆ ಮುಗಿಯುವವರೆಗೆ ದೇವಸ್ಥಾನದಲ್ಲಿಯೇ ಇದ್ದೆ.  ರಾತ್ರಿ 08.45 ಕ್ಕೆ ಅರ್ಚಕರಾದ  ಗಣೇಶ್ ಭಟ್ ದೇವಸ್ಥಾನದ ಬೀಗವನ್ನು ಹಾಕಿಕೊಂಡು ಶ್ರೀರಂಗಪಟ್ಟಣಕ್ಕೆ ಹೋಗಿರುತ್ತಾರೆ. ನನ್ನ  ಚಿಕ್ಕಪ್ಪನ ಮಗನಾದ ನಟರಾಜ್ ಎಂಬಾತ ದಿನನಿತ್ಯ ಬೆಳಗ್ಗೆ ಸುಮಾರು  5  ಗಂಟೆಗೆ ಶ್ರೀ ಕಾಳಿಕಾದೇವಿ ದೇವಸ್ಥಾನದ ಬಾಗಿಲನ್ನು ತೆಗೆದು ಕ್ಲೀನ್ ಮಾಡುವ ಕೆಲಸ ಮಾಡುತ್ತಾನೆ.   12/03/2020 ರಂದು ನನ್ನ ಚಿಕ್ಕಪ್ಪನ ಮಗ ನಟರಾಜ್ ಬೆಳಿಗ್ಗೆ ಸುಮಾರು 5  ಗಂಟೆಗೆ ಶ್ರೀಕಾಳಿಕಾಂಬ ದೇವಸ್ಥಾನಕ್ಕೆ ಕ್ಲೀನ್ ಮಾಡಲು ಬಂದಾಗ ದೇವಸ್ಥಾನದ ಮುಖ್ಯ ದ್ವಾರದ ಬಾಗಿಲನ್ನು, ಗರ್ಭಗುಡಿಯ ಬಾಗಿಲು ಮತ್ತು ಗೋಲಕದ ಬೀಗಗಳನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮೀಟಿ ತೆಗೆದಿರುತ್ತಾರೆಂದು ನನಗೆ ಕರೆ ಮಾಡಿದ. ನಾನು ತಕ್ಷಣ ದೇವಸ್ಥಾನಕ್ಕೆ ಹೋಗಿ ನೋಡಿದಾಗ ಯಾರೋ ಕಳ್ಳರು ದೇವಸ್ಥಾನದ ಬಾಗಿಲು ಹಾಗೂ ಗರ್ಭಗುಡಿಯ ಬಾಗಿಲುಗಳಿಗೆ ಹಾಕಿದ್ದ ಬೀಗಗಳನ್ನು ಮುರಿದು ಒಳಗೆ ಪ್ರವೇಶ ಮಾಡಿ ಹಾಲ್ ನಲ್ಲಿ ಇದ್ದ ಗೋಲಕದ ಬೀಗವನ್ನು ಮುರಿದು ಗೋಲಕದಲ್ಲಿದ್ದ ಸುಮಾರು 10000 ರೂ. ಹಣವನ್ನು ಕಳ್ಳತನ ಮಾಡಿದ್ದು, ಗರ್ಭಗುಡಿಯ ಒಳಗೆ ದೇವರ ಮೇಲಿದ್ದ ಒಟ್ಟು ಸುಮಾರು    06 ಗ್ರಾಂ ತೂಕದ  2ಚಿನ್ನದ ತಾಳಿಗಳು, ಗರ್ಭಗುಡಿಯ ಬೀರುವಿನಲ್ಲಿ ಇಟ್ಟಿದ್ದ  ಸುಮಾರು 50 ಗ್ರಾಂ ತೂಕದ ಬೆಳ್ಳಿಯ ಬಟ್ಟಲುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಹಣ, ಚಿನ್ನದ ಪದಾರ್ಥ, ಬೆಳ್ಳಿ ಬಟ್ಟಲುಗಳು ಇವುಗಳ ಒಟ್ಟು ಬೆಲೆ ಸುಮಾರು 24500ರೂ. ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: