ಮೈಸೂರು

ಕೊರೋನಾ ವೈರಸ್ ಭೀತಿ ಹಿನ್ನೆಲೆ : ಚಿತ್ರಮಂದಿರಗಳು ಬಂದ್; ಚಿತ್ರ ಮಂದಿರದ ಶುಚಿತ್ವದೆಡೆ ಗಮನ

ಮೈಸೂರು,ಮಾ.14-ಮಾರಣಾಂತಿಕ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ಎಲ್ಲ ಚಿತ್ರಮಂದಿರ, ಮಾಲ್, ಕ್ಲಬ್ ಬಂದ್ ಮಾಡುವಂತೆ ಆದೇಶಿಸಿದೆ.

ಅದರಂತೆ ನಗರದಲ್ಲಿ ಎಲ್ಲ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದೆ. ಗಾಯತ್ರಿ ಚಿತ್ರಮಂದಿರವನ್ನು ಬಂದ್ ಮಾಡಿರುವುದರ ಜೊತೆಗೆ ಸ್ವಚ್ಛತೆಯನ್ನು ಮಾಡಲಾಗಿದೆ.

ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ವಚ್ಛತೆಯನ್ನು ಮಾಡಲಾಗಿದೆ ಎಂದು ಚಿತ್ರಮಂದಿರದ ಮಾಲೀಕ ರಾಜಾರಾಂ ತಿಳಿಸಿದ್ದಾರೆ. ಇನ್ನು ನಗರದಲ್ಲಿ ಚಿತ್ರಮಂದಿರಗಳು ಹಾಗೂ ಮಾಲ್ ಗಳು ಬಿಕೋ ಎನ್ನುತ್ತಿದ್ದವು.

ಸರ್ಕಾರ ಒಂದು ವಾರಗಳ ಕಾಲ ಎಲ್ಲ ಚಿತ್ರಮಂದಿರ, ಮಾಲ್, ಕ್ಲಬ್, ಶಾಲಾ-ಕಾಲೇಜುಗಳನ್ನು ಬಂದ್ ಮಾಡುವಂತೆ ಆದೇಶಿಸಿರುವುದರ ಜೊತೆಗೆ ಯಾವುದೇ ರೀತಿಯ ಸಭೆ, ಸಮಾರಂಭ, ಮದುವೆ, ಜಾತ್ರೆಗಳನ್ನು ಮಾಡದಂತೆ ಸೂಚಿಸಿದೆ. (ಎಚ್.ಎನ್, ಎಂ.ಎನ್)

Leave a Reply

comments

Related Articles

error: