ಮೈಸೂರು

ಕಾಂಗ್ರೆಸ್-ಬಿಜೆಪಿ ತಾಲೂಕಾಧ್ಯಕ್ಷರಿಗೆ ನೋಟೀಸ್ ಜಾರಿ

ಭಾನುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ನ ತಾಲೂಕು ಅಧ್ಯಕ್ಷ, ಬಿಜೆಪಿ ಹಮ್ಮಿಕೊಂಡಿದ್ದ ಎರಡು ದಿನದ ಸಮಾವೇಶದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರುಗಳು ಭಾಗಿಯಾದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ.

ಸಭೆಗೆ ಕೇವಲ ಸ್ಥಳಗಳಿಗೆ ಮಾತ್ರ ಅನುಮತಿ ಪಡೆಯಲಾಗಿತ್ತು. ಆದರೆ, ವಾಹನಗಳಿಗೆ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯದೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ‌ ಹಿನ್ನಲೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ತಾಲೂಕು ಅಧ್ಯಕ್ಷರುಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಮುಖ್ಯಮಂತ್ರಿ ಸಹಿತ ಯಾರೂ ಕೂಡ, ಯಾವ ವಾಹನಗಳಿಗೂ ಅನುಮತಿ ಪಡೆದಿಲ್ಲ. ಇತ್ತ ಬಿಜೆಪಿ ಮುಖಂಡರು ಕೂಡ ಯಾವ ಸಭೆಗಳಿಗೂ ಅನುಮತಿ ಪಡೆಯದೆ ಇರುವುದು ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ. ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಯವರಿಗೆ ಮಾಹಿತಿ ರವಾನೆ ಮಾಡಿ ಎರಡೂ ಪಕ್ಷಗಳ ತಾಲೂಕು ಅಧ್ಯಕ್ಷರುಗಳಿಗೆ ನೋಟೀಸ್ ನೀಡಲಾಗಿದೆ.

ನೋಟೀಸ್ ಪಡೆದ ಒಂದು ದಿನದೊಳಗೆ ಉತ್ತರ ಕೊಡುವಂತೆ ಆದೇಶ ನೀಡಲಾಗಿದೆ. ಮಾತ್ರವಲ್ಲ, ಸರಿಯಾದ ಉತ್ತರ‌ ಬರದಿದ್ದರೆ, ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಇನ್ನೂ ‌ಮೂರು ದಿನಗಳ ಹಿಂದೆ ಕಾರ್ಯಕ್ರಮದ ವೇಳೆ ಸಿ.ಎಂ ಸಿದ್ದರಾಮಯ್ಯನವರು, ಸಮುದಾಯದ ಕನಕ ಕಲ್ಯಾಣ ಮಂಟಪದ ಕಾಮಗಾರಿ ಪರಿಶೀಲನೆ ಮಾಡಿರುವುದು ಸಹ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದರ ವಿರುದ್ದವೂ ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿ ಜಗದೀಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: