ಪ್ರಮುಖ ಸುದ್ದಿ

ಪೊನ್ನಂಪೇಟೆ ನೂತನ ತಾಲೂಕು ರಚನೆ ಯಶಸ್ವಿ : ಹೋರಾಟ ಸಮಿತಿಗಳ ಸಭೆ

ರಾಜ್ಯ( ಮಡಿಕೇರಿ) ಮಾ.14 :- ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಹಾಗೂ ಪೊನ್ನಂಪೇಟೆ ನಾಗರಿಕ ವೇದಿಕೆಯ ವತಿಯಿಂದ ನೂತನ ತಾಲ್ಲೂಕು ರಚನೆಯ ಯಶಸ್ಸಿನ ಕುರಿತು ಚರ್ಚಿಸಲು ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಸತತ ಪರಿಶ್ರಮ ಮತ್ತು ನಿಸ್ವಾರ್ಥ ಸೇವೆಯಿಂದ ಹೊಸ ತಾಲೂಕು ರಚನೆಯಾಗಿದೆ.
ದಕ್ಷಿಣ ಕೊಡಗಿನ 21 ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಪಂಚಾಯ್ತಿಗಳು ಸಂಘ ಸಂಸ್ಥೆಗಳು ಸೇರಿದಂತೆ ಇನ್ನಿತರರು ಹೋರಾಟ ಸಮಿತಿಗೆ ನೀಡಿದ ಸಹಕಾರದಿಂದ ಜನಪ್ರತಿನಿಧಿಗಳ ಒತ್ತಾಸೆಯಿಂದ ತಾಲೂಕು ಮಂಜೂರಾಗಿದೆ. ಆದಷ್ಟು ಶೀಘ್ರ ಹೊಸ ತಾಲೂಕಿನಲ್ಲಿ ಅಧಿಕಾರಿಗಳು ಸೇವೆ ಆರಂಭಿಸಲು ಮತ್ತು ಆರ್ಥಿಕ ಕ್ರೋಢೀಕರಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಅರಣ್ಯ ಅಭಿವೃದ್ದಿ ಸಮಿತಿಯ ಮಾಜಿ ಉಪಾಧ್ಯಕ್ಷೆ ಹಾಗೂ ಹೋರಾಟ ಸಮಿತಿಯ ಪ್ರಮುಖರಾದ ಪದ್ಮಿನಿ ಪೊನ್ನಪ್ಪ ಮಾತನಾಡಿ ಹೊಸ ತಾಲೂಕು ರಚನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ ಹಿನ್ನಲೆಯಲ್ಲಿ ನೂತನ ತಾಲೂಕು ರಚನೆಯಾಗಿದೆ. ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೆಗೌಡರ ಪ್ರತಿಫಲದಿಂದ ಇಂದು ಹೊಸ ತಾಲೂಕು ರಚನೆಯಾಗಲು ಕಾರಣವಾಗಿದೆ. ಸಮಾರಂಭದಲ್ಲಿ ಇವರನ್ನು ಅಹ್ವಾನಿಸಿ ಗೌರವಿಸುವುದರಿಂದ ಸಮಿತಿಯ ಗೌರವ ಹೆಚ್ಚಾಗಲಿದೆ ಎಂದರು.
ಸಮಿತಿಯ ಹಿರಿಯರು ಹಾಗೂ ವಕೀಲರಾದ ಅಪ್ಪಚ್ಚು, ಹೋರಾಟ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ ಮಾತನಾಡಿದರು. ನಾಗರಿಕ ಹೋರಾಟ ಸಮಿತಿಯ ಉಪಾಧ್ಯಕ್ಷÀ ಸಿ.ಕೆ.ಸೋಮಯ್ಯ ಅವರು ಸಮಿತಿಯು ಸಾರ್ವಜನಿಕವಾಗಿ ಸಂಗ್ರಹಿಸಿದ ಹಣದ ವಿವರವನ್ನು ಸಭೆಯ ಮುಂದಿಟ್ಟರು.
ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ, ಹುದಿಕೇರಿಯ ಹಿರಿಯ ನಾಗರಿಕರ ಚೆಕ್ಕೆರ ವಾಸು ಕುಟ್ಟಪ್ಪ, ಸಮಿತಿಯ ನಿರ್ದೇಶಕರಾದ ಎರ್ಮು ಹಾಜಿ, ಸೇರಿದಂತೆ ಹಿರಿಯರು ಸಲಹೆಗಳನ್ನು ನೀಡಿದರು.
ಕೊಡವ ಸಮಾಜದ ಮಾಜಿ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ತಾಲೂಕು ಪಂಚಾಯ್ತಿ ಸದಸ್ಯ ಆಶಾ ಜೇಮ್ಸ್, ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೂಕಳೇರ ಸುಮಿತ್ರ, ಸದಸ್ಯರಾದ ಕಾವ್ಯ ಮಧು, ರೇಖಾ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು. ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಬಿ.ಪೂಣಚ್ಚ ಅವರು ಸ್ವಾಗತಿಸಿ ವಂದಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: